* ಮಾರ್ಚ್ 6 ರಿಂದ 9ರವರೆಗೆ ಪ್ಯೂಚುರೆಕ್ಸ್ ಟ್ರೇಡ್ ಫೇರ್ ಮತ್ತು ಈವೆಂಟ್ಸ್ಪ್ರೈವೇಟ್ ಲಿಮಿಟೆಡ್ ಆಯೋಜಿಸುತ್ತಿರುವ ಭಾರತದ ಅತಿ ದೊಡ್ಡಗಣಿ ಮತ್ತು ಮೂಲಭೂತ ಸೌಕರ್ಯಗಳ ಪ್ರದರ್ಶನವಾದ 3ನೇ ಒಡಿಶಾ ಗಣಿ ಮತ್ತು ಮೂಲಭೂತ ಸೌಕರ್ಯ ಅಂತಾರಾಷ್ಟ್ರೀಯ ಎಕ್ಟೋಗೆ ಭುವನೇಶ್ವರದಲ್ಲಿನ ಬಾರಾಮುಂಡ ಮೈದಾನದಲ್ಲಿ ವೇದಿಕೆ ಸಜ್ಜಾಗಿದೆ.* ಈ ಕಾರ್ಯಕ್ರಮಕ್ಕೆ ಉದ್ಯಮ ನಾಯಕರಾದ ಪಿಎಚ್ಚಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ, ಸ್ಕಿಲ್ ಕೌನ್ಸಿಲ್ ಆಫ್ ಮೈನಿಂಗ್ ವಲಯ ಬೆಂಬಲ ನೀಡುತ್ತಿದೆ.* ಒಡಿಶಾ ಅಸೆಂಬ್ಲಿ ಸ್ಮಾಲ್ ಮತ್ತು ಮೀಡಿಯಂ ಎಂಟರ್ಪ್ರೈಸಸ್ (ಓಎಎಸ್ಎಂಇ) ಸಹ-ಆಯೋಜಿಸುತ್ತಿದೆ. * ಈ ಎಕ್ಟೋಗೆ ಈಗಾಗಲೇ NGO ಪಾಲುದಾರರಾಗಿ ಹೆಲ್ಸ್, ಇಂಡಿ ಟೀ ಮತ್ತು ಜ್ಞಾನ ಪಾಲುದಾರರಾಗಿ ಅನ್ವೇಷಿ ಫೌಂಡೇಷನ್ ಬೆಂಬಲ ನೀಡುತ್ತಿವೆ.* ಈ ನಾಲ್ಕುದಿನಗಳ ಬೃಹತ್ ಕಾರ್ಯಕ್ರಮವು ಭಾರತ ಮತ್ತು ಪ್ರಪಂಚದಾದ್ಯಂತದ ಗಣಿಗಾರಿಕೆ, ನಿರ್ಮಾಣ ಮತ್ತು ಮೂಲಸೌಕರ್ಯ ಉದ್ಯಮಗಳ ದೊಡ್ಡ ಉದ್ಯಮಗಳನ್ನು ಒಂದೇ ಕಡೆ ತರುವ ನಿರೀಕ್ಷೆಯಿದೆ.* 3ನೇ ಒಡಿಶಾ ಗಣಿಗಾರಿಕೆ ಮತ್ತು ಮೂಲಸೌಕರ್ಯ ಅಂತರರಾಷ್ಟ್ರೀಯ ಪ್ರದರ್ಶನವು ಅತ್ಯಾಧುನಿಕ ಗಣಿಗಾರಿಕೆ ಯಂತ್ರೋಪಕರಣಗಳು, ತಂತ್ರಜ್ಞಾನಗಳು, ಸೇವೆಗಳು ಮತ್ತು ಸರಬರಾಜುಗಳನ್ನು ಪ್ರದರ್ಶಿಸಲಿದೆ.* ಗಣಿಗಾರಿಕೆ ಮತ್ತುಮೂಲಸೌಕರ್ಯ ವಲಯಗಳ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸುತ್ತದೆ. ಇದರಲ್ಲಿ 250ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, ಕೈಗಾರಿಕೆಗಳ ಭವಿಷ್ಯವನ್ನು ರೂಪಿಸುವ ಪ್ರಗತಿಗೆ ಸಾಕ್ಷಿಯಾಗಲಿದ್ದಾರೆ.* ಕಳೆದ ಆವೃತ್ತಿಯು ₹1,000 ಕೋಟಿ ವ್ಯವಹಾರವನ್ನು ದಾಖಲಿಸಿದೆ. ಈ ವರ್ಷ, ಗಣಿಗಾರಿಕೆ ಮತ್ತು ಮೂಲಸೌಕರ್ಯ ಪರಿಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ವ್ಯವಹಾರದ ಪ್ರಮಾಣವು ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.* ಈ ಕಾರ್ಯಕ್ರಮವು ವಿಸ್ತೃತ ಭಾಗವಹಿಸುವಿಕೆ ಮತ್ತು ತೊಡಗಿಸಿಕೊಳ್ಳುವಿಕೆ ಅವಕಾಶಗಳೊಂದಿಗೆ 25% ರಷ್ಟು ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ.