Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭೂತಾನ್ನಲ್ಲಿ ಪುನಾತ್ಸಾಂಗ್ಚು–II ಯೋಜನೆ: ಭಾರತ–ಭೂತಾನ್ ಸಹಕಾರದ ನವ ಶಕ್ತಿ ಅಧ್ಯಾಯ
13 ನವೆಂಬರ್ 2025
*
ಪ್ರಧಾನಿ ನರೇಂದ್ರ ಮೋದಿ
ಅವರು
ಮಂಗಳವಾರ (ನವೆಂಬರ್ 11) ಎರಡು ದಿನಗಳ ಭೂತಾನ್ ಪ್ರವಾಸವನ್ನು
ಆರಂಭಿಸಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು
ಭೂತಾನ್ನ ನಾಲ್ಕನೇ ದೊರೆ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರ 70ನೇ ಜನ್ಮದಿನಾಚರಣೆ
ಯಲ್ಲಿ ಭಾಗವಹಿಸಲಿದ್ದು,
ಪುನಾತ್ಸಾಂಗ್ಚು-II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
* ಭಾರತ ಮತ್ತು ಭೂತಾನ್ ನಡುವಿನ ಸ್ನೇಹ ಮತ್ತು ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಪ್ರವಾಸದ ಪ್ರಮುಖ ಗುರಿಯಾಗಿದೆ.
*
1,020 ಮೆಗಾವಾಟ್ ಸಾಮರ್ಥ್ಯದ
ಈ ದೊಡ್ಡ ಯೋಜನೆ ಭೂತಾನ್ನ ಪುನಾಖಾ ಪ್ರದೇಶದಲ್ಲಿ
ನಿರ್ಮಾಣಗೊಂಡಿದ್ದು, ಇದು ಭಾರತದಿಂದ ಹಣಕಾಸು ಮತ್ತು ತಾಂತ್ರಿಕ ಸಹಾಯದೊಂದಿಗೆ ಪೂರ್ಣಗೊಂಡಿದೆ.
* ಈ ಯೋಜನೆ ಭೂತಾನ್ನ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು
ಸುಮಾರು 40 ಶೇಕಡಾ
ಹೆಚ್ಚಿಸುವುದರೊಂದಿಗೆ, ದೇಶವನ್ನು ಶುದ್ಧ ಶಕ್ತಿ ಉತ್ಪಾದನೆಯ ಕೇಂದ್ರವಾಗಿಸಲು ಸಹಕಾರಿ ಆಗಲಿದೆ.
* ಪ್ರವಾಸದ ವೇಳೆ, ಅವರು ಭೂತಾನ್ನ ಪ್ರಸ್ತುತ ದೊರೆ ಜಿಗ್ಮೆ ಖೇಸರ್ ನಾಮ್ಗ್ಯಾಲ್ ವಾಂಗ್ಚುಕ್, ನಾಲ್ಕನೇ ದೊರೆ, ಮತ್ತು ಪ್ರಧಾನಿ ಶೆರಿಂಗ್ ತೊಬ್ಗೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
* ಭೇಟಿಯ ಮತ್ತೊಂದು ಪ್ರಮುಖ ಮೈಲಿಗಲ್ಲು ಎಂದರೆ, ಭಾರತ ಮತ್ತು ಭೂತಾನ್ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಪುನಾತ್ಸಾಂಗ್ಚು-II ಜಲವಿದ್ಯುತ್ ಯೋಜನೆಯ ಉದ್ಘಾಟನೆಯಾಗಿದೆ. ಇದು ಉಭಯ ದೇಶಗಳ ನಡುವಿನ ಯಶಸ್ವಿ ಇಂಧನ ಸಹಭಾಗಿತ್ವದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
* ಭಾರತ ಮತ್ತು ಭೂತಾನ್ ನಡುವೆ ಆಳವಾದ ಪರಸ್ಪರ ನಂಬಿಕೆ, ತಿಳುವಳಿಕೆ ಮತ್ತು ಸದ್ಭಾವನೆಯನ್ನು ಆಧರಿಸಿದ ಮಾದರಿ ಸ್ನೇಹ ಸಂಬಂಧವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
* "ನಮ್ಮ ಈ ಪಾಲುದಾರಿಕೆಯು ನಮ್ಮ
'ನೆರೆಹೊರೆ ಮೊದಲು'
ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ ಮತ್ತು ನೆರೆಯ ದೇಶಗಳ ನಡುವಿನ ಸೌಹಾರ್ದಯುತ ಸಂಬಂಧಗಳಿಗೆ ಒಂದು ಮಾದರಿಯಾಗಿದೆ," ಎಂದು ಮೋದಿ ತಿಳಿಸಿದ್ದಾರೆ.
* ಈ ಯೋಜನೆಯಿಂದ ಆಗುವ ವಿದ್ಯುತ ಉತ್ಪಾದನೆ ಭಾರತ ಮತ್ತು ಭೂತಾನ್ ಎರಡು ರಾಷ್ಟ್ರಗಳ ಪೂರೈಕೆ ಆಗಲಿದೆ.ಇದೆ ಸಂದರ್ಭದಲ್ಲಿ ಭೂತಾನ್ ವಿದ್ಯುತ ಯೋಜನೆಗಳ ಅನುಷ್ಠಾನಕ್ಕೆ
ಭಾರತ 4000 ಕೋಟಿ ರೂ.ಗಳ
ಸಾಲವನ್ನು ಘೋಷಿಸಿದೆ.
* ಭೂತಾನ್ನ ಜಲವಿದ್ಯುತ್ ಶಕ್ತಿ ಭಾರತಕ್ಕೆ ಪ್ರಮುಖವಾಗಿ ರಫ್ತು ಆಗುತ್ತದೆ. ಈ ಸಹಕಾರದಿಂದ ಭಾರತಕ್ಕೆ ನವೀಕರಿಸಬಹುದಾದ ಶಕ್ತಿ ದೊರೆಯುವ ಜೊತೆಗೆ, ಭೂತಾನ್ಗೆ ಆರ್ಥಿಕ ಆದಾಯದ ಮೂಲವೂ ವೃದ್ಧಿಯಾಗಿದೆ.
“ನೆಬೈರ್ಹುಡ್ ಫಸ್ಟ್” (Neighbourhood First)
ನೀತಿಯಡಿ ಭಾರತದ ಪ್ರಾದೇಶಿಕ ಶಕ್ತಿ ಸಹಕಾರ ಬಲಗೊಂಡಿದ್ದು, ಇಂಧನ ಸ್ವಾವಲಂಬನೆಯತ್ತ ಭಾರತದ ಹೆಜ್ಜೆಯನ್ನು ಇದು ಮತ್ತಷ್ಟು ದೃಢಪಡಿಸುತ್ತದೆ.
* ಪುನಾತ್ಸಾಂಗ್ಚು–II ಯೋಜನೆಯ ಉದ್ಘಾಟನೆ ಭಾರತ ಮತ್ತು ಭೂತಾನ್ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶುದ್ಧ ಶಕ್ತಿಯ ಸಹಕಾರದ ಹೊಸ ಅಧ್ಯಾಯವನ್ನು ತೆರೆದಿದೆ. ಈ ಮೂಲಕ ಎರಡೂ ರಾಷ್ಟ್ರಗಳು ಶಾಶ್ವತ ಶಕ್ತಿ ಭವಿಷ್ಯ ನಿರ್ಮಾಣದ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ.
*
“ಭಾರತ ಮತ್ತು ಭೂತಾನ್ನ ಸಹಭಾಗಿತ್ವ ಕೇವಲ ಶಕ್ತಿ ಉತ್ಪಾದನೆಗಷ್ಟೇ ಸೀಮಿತವಾಗಿಲ್ಲ; ಅದು ಪರಿಸರ ಸಂರಕ್ಷಣೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಭವಿಷ್ಯದ ಹಸಿರು ಬೆಳವಣಿಗೆಯ ದೃಷ್ಟಿಯಾಗಿದೆ.”
Take Quiz
Loading...