* ಭೂತಾನ್ ಬೈನಾನ್ಸ್ ಪೇ ಮತ್ತು ಡಿಕೆ ಬ್ಯಾಂಕ್ ಸಹಯೋಗದಲ್ಲಿ ಜಾಗತಿಕ ಮಟ್ಟದಲ್ಲಿ ಮೊದಲ ರಾಷ್ಟ್ರೀಯ ಕ್ರಿಪ್ಟೋಕರೆನ್ಸಿ ಆಧಾರಿತ ಪ್ರವಾಸೋದ್ಯಮ ಪಾವತಿ ವ್ಯವಸ್ಥೆಯನ್ನು ಪರಿಚಯಿಸಿದೆ.* ಈ ವ್ಯವಸ್ಥೆಯ ಮೂಲಕ ಬೈನಾನ್ಸ್ ಖಾತೆ ಹೊಂದಿರುವ ಪ್ರಯಾಣಿಕರು ವಿಮಾನ ಟಿಕೆಟ್ಗಳಿಂದ ಹಿಡಿದು ಹೋಟೆಲ್ಗಳ ವಸತಿ, ವೀಸಾ ಶುಲ್ಕ, ಸ್ಮಾರಕ ಪ್ರವೇಶ, ಮಾರ್ಗದರ್ಶನ ಸೇವೆಗಳು, ರಸ್ತೆಬದಿಯ ಹಣ್ಣುಗಳ ಖರೀದಿ ಮುಂತಾದ ಸೇವೆಗಳಿಗೆ ಕ್ರಿಪ್ಟೋ ಬಳಸಿ ಪಾವತಿ ಮಾಡಬಹುದು.* ಡಿಕೆ ಬ್ಯಾಂಕ್ ಮತ್ತು ಬೈನಾನ್ಸ್ ಪೇ ಮೂಲಕ ಈಗಾಗಲೇ 100 ಕ್ಕೂ ಹೆಚ್ಚು ಸ್ಥಳೀಯ ವ್ಯಾಪಾರಿಗಳು ಈ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಪ್ರವಾಸಿಕರಿಗೆ ನಗದು ಮತ್ತು ಕಾರ್ಡ್ರಹಿತ ಅನುಭವ ಸಿಕ್ಕಲಿದೆ.* ಬೈನಾನ್ಸ್ ಸಿಇಒ ರಿಚರ್ಡ್ ಟೆಂಗ್ ಪ್ರಕಾರ, ಈ ಉಪಕ್ರಮವು ತಂತ್ರಜ್ಞಾನದಿಂದ ಸಂಸ್ಕೃತಿ ಮತ್ತು ಆರ್ಥಿಕತೆ ನಡುವೆ ಸೇತುವೆ ನಿರ್ಮಾಣ ಮಾಡುವ ಉದಾಹರಣೆಯಾಗಿದೆ.* ಭೂತಾನ್ ಪ್ರವಾಸೋದ್ಯಮ ನಿರ್ದೇಶಕ ಡ್ಯಾಮ್ಚೊ ರಿಂಜಿನ್ ಪ್ರಕಾರ, ಈ ಯೋಜನೆ ಪ್ರವಾಸಿಕರಿಗೆ ತಡೆಯಿಲ್ಲದ ಅನುಭವವನ್ನೂ, ಗ್ರಾಮೀಣ ವ್ಯಾಪಾರಿಗಳಿಗೆ ಪ್ರವಾಸೋದ್ಯಮ ಆರ್ಥಿಕತೆಯಲ್ಲಿ ಭಾಗವಹಿಸಲು ಅವಕಾಶವನ್ನೂ ನೀಡುತ್ತದೆ.* ಬೈನಾನ್ಸ್ ಅಪ್ಲಿಕೇಶನ್ನಲ್ಲಿ ಡೈನಾಮಿಕ್ ಮತ್ತು ಸ್ಟ್ಯಾಟಿಕ್ ಕ್ಯೂಆರ್ ಕೋಡ್ಗಳ ಮೂಲಕ ಬಿಎನ್ಬಿ, ಬಿಟಿಸಿ, ಯುಎಸ್ಡಿಸಿ ಸೇರಿದಂತೆ 100 ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳ ಪಾವತಿ ಸಾಧ್ಯವಾಗಿದೆ.* ಡಿಕೆ ಬ್ಯಾಂಕ್ ಮೂಲಕ ಸ್ಥಳೀಯ ಕರೆನ್ಸಿಯಲ್ಲಿ ತಕ್ಷಣ ಪರಿವರ್ತನೆಯೂ ಇದೆ.