Job Description: * ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ.* ಮೇ 13ರಂದು ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಉತ್ತರಾಧಿಕಾರಿಯಾಗಿ ಬಿ.ಆರ್.ಗವಾಯಿ ಅವರು ಮೇ 14ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.* ಗವಾಯಿ ಅವರು 2010ರಲ್ಲಿ ನಿವೃತ್ತರಾದ ಕೆ.ಜಿ. ಬಾಲಕೃಷ್ಣನ್ ನಂತರ, ಪರಿಶಿಷ್ಟ ಜಾತಿಯಿಂದ ಬಂದ ಎರಡನೇ ಸಿಜೆಐ ಆಗಿದ್ದರೆ.* ಸಿಜೆಐ ಖನ್ನಾ ಅವರು ಏಪ್ರಿಲ್ 16ರಂದು ಗವಾಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.* ಗವಾಯಿ ಅವರಿಗೆ ನವೆಂಬರ್ 23, 2025ರಂದು 65 ವರ್ಷವಾಗುವದರಿಂದ ಸುಮಾರು 6 ತಿಂಗಳ ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲಿದ್ದಾರೆ.* 1960ರಲ್ಲಿ ಜನಿಸಿದ ಗವಾಯಿ ಅವರು 1985ರಲ್ಲಿ ಕಾನೂನು ವೃತ್ತಿಜೀವನ ಆರಂಭಿಸಿ, 2003ರಲ್ಲಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿದ್ದು, 2019ರಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡರು.* ಅವರು ಬಿಹಾರದ ಮಾಜಿ ರಾಜ್ಯಪಾಲ ಮತ್ತು ದಲಿತ ನಾಯಕ ‘ದಾದಾಸಾಹೇಬ್’ ರಾಮಕೃಷ್ಣ ಗವಾಯಿ ಅವರ ಪುತ್ರರಾಗಿದ್ದಾರೆ.* ನ್ಯಾಯಮೂರ್ತಿ ಗವಾಯಿ ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಮಹತ್ವದ ತೀರ್ಪುಗಳಲ್ಲಿ ಪಾತ್ರವಹಿಸಿದ್ದಾರೆ.• 370ನೇ ವಿಧಿಯನ್ನು ರದ್ದುಗೊಳಿಸಿದ ಸಂವಿಧಾನ ಪೀಠದ ಸದಸ್ಯರಾಗಿದ್ದರು.• ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿದ ತೀರ್ಪಿಗೆ ಕೊಡುಗೆ ನೀಡಿದ್ದರು.• ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕೆ ಅವಕಾಶ ನೀಡಿದ ತೀರ್ಪಿನಲ್ಲಿ ಭಾಗವಹಿಸಿದ್ದರು.• ಮನೀಷ್ ಸಿಸೋಡಿಯಾ ಜಾಮೀನು ತೀರ್ಪು ಬರೆದು ವೈಯಕ್ತಿಕ ಸ್ವಾತಂತ್ರ್ಯವನ್ನು ಬಲಪಡಿಸಿದರು.• ಎ.ಜಿ. ಪೆರಾರಿವಾಲನ್ ಬಿಡುಗಡೆ ತೀರ್ಪು ನೀಡಿದ ಪೀಠಕ್ಕೆ ಅಧ್ಯಕ್ಷತೆ ವಹಿಸಿದ್ದರು.- ಇವುಗಳು ನ್ಯಾಯಮೂರ್ತಿ ಗವಾಯಿ ಅವರ ನ್ಯಾಯಾಂಗ ಧೋರಣೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಒತ್ತು ನೀಡುವ ಪ್ರಮುಖ ಕೊಡುಗೆಗಳಾಗಿವೆ.