Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
‘ಭೂಮಿಯ ಆವರ್ತನ ದಿನ’-2025
8 ಜನವರಿ 2025
* ಭೂಮಿಗೆ ಎರಡು ಬಗೆಯ ಚಲನೆಗಳಿವೆ. ಬುಗುರಿಯಂತೆ ಗಿರಕಿ ಹೊಡೆಯುತ್ತಲೇ ಭೂಮಿಯು ಸೂರ್ಯನನ್ನು ಸುತ್ತುವುದು. ಈ ಚಲನೆಗಳಿಗೆ ಕ್ರಮ ವಾಗಿ ಆವರ್ತನ ಮತ್ತು ಪರಿಭ್ರಮಣ ಎನ್ನಲಾಗುತ್ತದೆ. ಅಕ್ಷದಲ್ಲಿ ಆವರ್ತನ ಮತ್ತು ಕಕ್ಷೆಯಲ್ಲಿ ಪರಿಭ್ರಮಣ. ಆವರ್ತನ ಅಕ್ಷವು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಜೋಡಿಸುವ ಒಂದು ಊಹಾತ್ಮಕ ಸರಳರೇಖೆ. ಭೂಮಿಯು ತನ್ನ ಕಕ್ಷೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹೊರಳುವುದು. ಹಾಗಾಗಿ, ಸ್ಥಿರವಾಗಿರುವ ಸೂರ್ಯನೇ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಿದಂತೆ ನಮಗೆ ಭಾಸವಾಗುತ್ತದೆ. ಒಂದು ವೇಳೆ ಭೂಮಿ ಆವರ್ತಿಸ ದಿದ್ದರೆ ಅದರ ಅರ್ಧಭಾಗ ಸದಾ ಅತಿ ತಾಪದಲ್ಲೂ ಉಳಿದರ್ಧ ಅತಿ ಶೈತ್ಯದಲ್ಲೂ ಇರುತ್ತಿತ್ತು. ಧರೆಯಲ್ಲಿ ಜೀವವೈವಿಧ್ಯವೇ ಸಾಧ್ಯವಿರುತ್ತಿರಲಿಲ್ಲ.
* 1851ರ ಜನವರಿ 8ರಂದು ಫ್ರಾನ್ಸ್ನ ಭೌತವಿಜ್ಞಾನಿ ಲಿಯಾನ್ ಫೌಕಾಲ್ಟ್, ಭೂಮಿ ತನ್ನ ಅಕ್ಷದ ಸುತ್ತ ಬುಗುರಿಯಂತೆ ಸುತ್ತುವುದಾಗಿ ಕಂಡುಹಿಡಿದ.
* ಈ ಮಹತ್ವದ ವಿದ್ಯಮಾನವನ್ನು ಸಂಭ್ರಮಿಸಲು ಪ್ರತಿ ವರ್ಷವೂ ವಿಶ್ವದೆಲ್ಲೆಡೆ ‘ಭೂಮಿಯ ಆವರ್ತನ ದಿನ’ ಎಂದು ಆಚರಿಸಲಾಗುತ್ತದೆ.
‘ನಮ್ಮ ಶಕ್ತಿ, ನಮ್ಮ ಗ್ರಹ’ ಎನ್ನುವುದು ಈ ಬಾರಿಯ ಘೋಷವಾಕ್ಯವಾಗಿದೆ.
* ಭೂಮಿಯ ಚಲನವಲನವನ್ನು ಅರ್ಥೈಸಿಕೊಳ್ಳುವುದೆಂದರೆ ಬ್ರಹ್ಮಾಂಡದ ಅರಿವಿನತ್ತ ಹೆಜ್ಜೆಗಳನ್ನಿಟ್ಟಂತೆ. ಅಂದಹಾಗೆ ಈ ಸಡಗರದ ಬೆನ್ನಲ್ಲೇ ಧರೆಯ ಎಲ್ಲ ನಿವಾಸಿಗಳಿಗೆ ದೊಡ್ಡ ಹೊಣೆಗಾರಿಕೆಯೂ ಇದೆ. ಆವರ್ತನ ಅಕ್ಷದ 23.5 ಡಿಗ್ರಿ ವಾಲಿಕೆ ನಿಸರ್ಗ ಸಹಜ ವಿದ್ಯಮಾನ. ಆದರೆ ಮನುಷ್ಯನ ನಾಗರಿಕತೆಯ ಅತಿ ವ್ಯಾಮೋಹ ಎನ್ನುವುದಿದೆಯಲ್ಲ. ಸೇವನೆ, ಕೃಷಿ, ಕೈಗಾರಿಕೆಯಂತಹ ನಾನಾ ಬಳಕೆಗಳ ನಿಮಿತ್ತ ಎಗ್ಗಿಲ್ಲದೆ ಅಂತರ್ಜಲವನ್ನು ಮೇಲೆತ್ತಲಾಗುತ್ತಿದೆ. ಇದರ ಪರಿಣಾಮ ಗೊತ್ತೇ! ಭೂಮಿಯ ಆವರ್ತನ ಅಕ್ಷ ಅಸಹಜ ಪಲ್ಲಟಕ್ಕೊಳಗಾಗಿದೆ. 1993- 2010ರ ಅವಧಿಯಲ್ಲಿ ಅದು 80 ಸೆಂ.ಮೀ. ಪೂರ್ವಕ್ಕೆ ಕದಲಿದೆ. ಪ್ರತಿವರ್ಷ ಸಾವಿರಾರು ಕೋಟಿ ಟನ್ನುಗಳಷ್ಟು ನೀರನ್ನು ಹೊರತೆಗೆಯುವುದರಿಂದ ಅಕ್ಷವು 4.3 ಸೆಂ.ಮೀ. ವಾಲುತ್ತಿದೆ. ಚೀನಾದ ಅತಿ ದೊಡ್ಡದಾದ ಯಾಂಗ್ಟಿಜ್ ನದಿಗೆ ಅಡ್ಡವಾಗಿ ನಿರ್ಮಿಸಿರುವ ಬೃಹತ್ ಅಣೆಕಟ್ಟು ಸೃಷ್ಟಿಸಿರುವ ದುರ್ದೆಸೆ ಎಷ್ಟೆಂದರೆ, ಆವರ್ತನ ಅಕ್ಷ ದಿನಕ್ಕೆ 0.06 ಮೈಕ್ರೊ ಸೆಕೆಂಡ್ನಷ್ಟು (ಒಂದು ಸೆಕೆಂಡ್ ಕೋನದ ಮಿಲಿಯನ್ನಿನ ಒಂದು ಅಂಶ) ವಾಲುತ್ತಿದೆ.ಇದರಿಂದಾಗಿ ಜಾಗತಿಕ ಸಾಗರ ಮಟ್ಟ 1.6 ಸೆಂ.ಮೀ. ಏರಿದೆ. ಭೂಗ್ರಹದ ಸ್ಥಿರತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮನುಷ್ಯ ತನ್ನ ಅಗತ್ಯಗಳನ್ನು ಪ್ರಕೃತಿಯೊಂದಿಗೆ ಪರಿಷ್ಕರಿಸಿ ಕೊಳ್ಳಬೇಕು, ಹೊಂದಿಸಿಕೊಳ್ಳಬೇಕು.
* ಪ್ರಕೃತಿ ಸಂರಕ್ಷಣೆಗೆ ಶಿಫಾರಸುಗಳು:
-ಮಳೆ ನೀರಿನ ಸಂಗ್ರಹ, ನೀರಿನ ಮರುಬಳಕೆ, ಮತ್ತು ಜಲ ನಿರ್ವಹಣೆ ಸುಧಾರಣೆ ಅವಶ್ಯ.
-ಬೃಹತ್ ಅಣೆಕಟ್ಟು ಮತ್ತು ನಿರ್ವಹಣೆಗಳು ಸುಸ್ಥಿರವಾಗಿರಬೇಕು.
Take Quiz
Loading...