* 2024 ವೈಆರ್4 ಕ್ಷುದ್ರಗ್ರಹದ ಬಗ್ಗೆ ಖಗೋಳಶಾಸ್ತ್ರಜ್ಞರು ಗಂಭೀರ ಗಮನ ಹರಿಸಿದ್ದು, ಹೊಸ ಗಣನೆಗಳ ಪ್ರಕಾರ ಈ ಕ್ಷುದ್ರಗ್ರಹವು ಮುಂದಿನ ವರ್ಷಗಳಲ್ಲಿ ಭೂಮಿಗೆ ಹಾನಿಕಾರಕ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.* ಸುಮಾರು 40ರಿಂದ 100 ಮೀಟರ್ ಅಗಲವಿರುವ ಇದು 2032ರ ವೇಳೆಗೆ ಭೂಮಿಗೆ ಅಪ್ಪಳಿಸುವ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.* 2032 ನಲ್ಲಿ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ. 2ರಷ್ಟು ಮಾತ್ರ ಎಂದಿರುವ ವಿಜ್ಞಾನಿಗಳು, ಅದು ಭೂಮಿಯನ್ನು ಸುರಕ್ಷಿತವಾಗಿ ಹಾದು ಹೋಗುವ ಸಾಧ್ಯತೆ ಶೇ. 98ರಷ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.* ನಾಸಾ ಮತ್ತು ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮಾರ್ಚ್ ವೇಳೆಗೆ ವೆಬ್ ಸ್ಪೇಸ್ ಟೆಲಿಸ್ಕೋಪ್ ಮೂಲಕ ಕ್ಷುದ್ರಗ್ರಹ 2024 ವೈಆರ್4 ಅನ್ನು ಹತ್ತಿರದಿಂದ ವೀಕ್ಷಿಸಲು ಯೋಜಿಸಿದೆ. ಈ ಬಾರಿ ತಪ್ಪಿಸಿದರೆ, ಅದರ ಪಥ ಹಾಗೂ ಭೂಮಿಗೆ ಅಪಾಯವಿದೆಯೇ ಎಂಬುದನ್ನು ತಿಳಿಯಲು 2028ರವರೆಗೆ ಕಾಯಬೇಕು.