Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭೂತಾನ್ ರಾಜಮಾತೆಗೆ ಪ್ರತಿಷ್ಠಿತ 22ನೇ 'ಸೋಲ್ಜರ್ ಆಫ್ ಹ್ಯುಮಾನಿಟಿ' ಪ್ರಶಸ್ತಿ ಗೌರವ
Authored by:
Akshata Halli
Date:
6 ಫೆಬ್ರುವರಿ 2026
➤ ಭೂತಾನ್ನ ರಾಜಮಾತೆ (Queen Mother)
ಗ್ಯಯಲುಮ್ ಆಶಿ ದೋರ್ಜಿ ವಾಂಗ್ಮೋ ವಾಂಗ್ಚುಕ್
ಅವರಿಗೆ ಪ್ರತಿಷ್ಠಿತ 22ನೇ
'ಉಪೇಂದ್ರ ನಾಥ್ ಬ್ರಹ್ಮ ಸೈನಿಕ ಆಫ್ ಹ್ಯುಮಾನಿಟಿ' (Soldier of Humanity) ಪ್ರಶಸ್ತಿ 2025
ಅನ್ನು ನೀಡಿ ಗೌರವಿಸಲಾಗಿದೆ. ಅಸ್ಸಾಂನ ಕೊಕ್ರಜಾರ್ನಲ್ಲಿರುವ ಬೋಡೋಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ (ಫೆಬ್ರವರಿ 2026) ನಡೆದ ಭವ್ಯ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು.
➤ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಭೂತಾನ್ ರಾಜಮಾತೆ ಗ್ಯಯಲುಮ್ ಆಶಿ ದೋರ್ಜಿ ವಾಂಗ್ಮೋ ವಾಂಗ್ಚುಕ್ ಅವರಿಗೆ ಮಾನವೀಯ ಸೇವೆಗಾಗಿ 2004 ರಿಂದ ಉಪೇಂದ್ರ ನಾಥ್ ಬ್ರಹ್ಮ ಟ್ರಸ್ಟ್ ನೀಡುತ್ತಾ ಬಂದಿರುವ 22ನೇ 'ಸೋಲ್ಜರ್ ಆಫ್ ಹ್ಯುಮಾನಿಟಿ' ಪ್ರಶಸ್ತಿಯನ್ನು ₹2 ಲಕ್ಷ ನಗದು ಹಾಗೂ ಗೌರವಗಳೊಂದಿಗೆ ಪ್ರದಾನ ಮಾಡಿದರು.
➤ ಭೂತಾನ್ ರಾಜಮಾತೆಯವರು ತಮ್ಮ
'ತಾರಾಯಣ ಫೌಂಡೇಶನ್'
ಮೂಲಕ ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಮಾಡಿದ ನಿಸ್ವಾರ್ಥ ಸೇವೆ ಹಾಗೂ ವಹಿಸಿದ ಮಹತ್ವದ ಪಾತ್ರವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
➤
ಉಪೇಂದ್ರ ನಾಥ್ ಬ್ರಹ್ಮ (ಬೋಡೋಫಾ)
: ಈ ಪ್ರಶಸ್ತಿಯು ಬೋಡೋ ಜನಾಂಗದ ಮಹಾನ್ ನಾಯಕ ಮತ್ತು ಸುಧಾರಕ
ಉಪೇಂದ್ರ ನಾಥ್ ಬ್ರಹ್ಮ
ಅವರ ನೆನಪಿಗಾಗಿ ಸ್ಥಾಪಿಸಲಾಗಿದೆ.ಅವರನ್ನು ಪ್ರೀತಿಯಿಂದ
'ಬೋಡೋಫಾ'
(ಬೋಡೋಗಳ ಪಿತಾಮಹ) ಎಂದು ಕರೆಯಲಾಗುತ್ತದೆ. ಅವರು ಅಖಿಲ ಬೋಡೋ ವಿದ್ಯಾರ್ಥಿ ಸಂಘದ (ABSU) ಅಧ್ಯಕ್ಷರಾಗಿ ಬೋಡೋ ಜನರ ಹಕ್ಕುಗಳಿಗಾಗಿ ಅಹಿಂಸಾತ್ಮಕವಾಗಿ ಹೋರಾಡಿದವರು.
ಮತ್ತು ವಿದ್ಯಾರ್ಥಿ ದಿನ
(Students' Day):
ಅವರ ಜನ್ಮದಿನವಾದ
ಮಾರ್ಚ್ 31
ಅನ್ನು ಅಸ್ಸಾಂ ಸರ್ಕಾರವು 'ವಿದ್ಯಾರ್ಥಿ ದಿನ' ಅಥವಾ
'ಛಾತ್ರ ದಿವಸ್'
ಎಂದು ಘೋಷಿಸಿದೆ.
➤ ಈ ಪ್ರಶಸ್ತಿ ಪ್ರದಾನವು ಕೇವಲ ವ್ಯಕ್ತಿಯೊಬ್ಬರಿಗೆ ನೀಡಿದ ಗೌರವವಲ್ಲ, ಬದಲಾಗಿ ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಮಾನವೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಭೂತಾನ್ನ
'ಒಟ್ಟು ರಾಷ್ಟ್ರೀಯ ಸಂತೋಷ' (Gross National Happiness)
ಪರಿಕಲ್ಪನೆಯು ಉಪೇಂದ್ರ ನಾಥ್ ಬ್ರಹ್ಮ ಅವರ ಮಾನವೀಯ ಮೌಲ್ಯಗಳಿಗೆ ಹತ್ತಿರವಾಗಿದೆ ಎಂದು ಸಮಾರಂಭದಲ್ಲಿ ಆಭಿಪ್ರಾಯಪಡಲಾಯಿತು.
Take Quiz
Loading...