* ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ನೂತನ ಮುಖ್ಯಸ್ಥರಾಗಿ ನಿವೃತ್ತ ಐಪಿಎಸ್ ಅಧಿಕಾರಿ ಶರದ್ ಕುಮಾರ್ ಅವರನ್ನು ನೇಮಕ ಮಾಡಿದೆ. ಕಳೆದ ವರ್ಷ ಈ ಘಟಕ್ಕೆ ಕೆಕೆ ಮಿಶ್ರಾ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು.* ಶರದ್ ಕುಮಾರ್ ಹರಿಯಾಣ ಕೇಡರ್‌ನ 1979ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, 2013 ರಿಂದ 2017ರ ವರೆಗೆ ಕೇಂದ್ರ ಜಾಗೃತ ಆಯೋಗದ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ, ಅವರನ್ನು ಕೇಂದ್ರ ಜಾಗೃತ ಆಯೋಗದಲ್ಲಿ ವಿಜಿಲೆನ್ಸ್ ಕಮಿಷನರ್ ಆಗಿ . ಜೂನ್ 2018 ರಿಂದ ಏಪ್ರಿಲ್ 2020ರ ವರೆಗೆ ಸೇವೆ ಸಲ್ಲಿಸಿದ್ದಾರೆ.* ಭಯೋತ್ಪಾದನಾ ಪ್ರಕರಣಗಳಿಗೆ ಸಂಭಂದಿಸಿದ ತನಿಖೆಗಳನ್ನು ಕೈಗೊಂಡಿದ್ದಾರೆ. ಭಯೋತ್ಪಾದನಾ ನಿಗ್ರಹದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ 1996 ರಲ್ಲಿ ರಾಷ್ಟ್ರಪತಿ ಪೊಲೀಸ್ ಪದಕ, 2002 ರಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಕ್ಕಾಗಿ ರಾಷ್ಟ್ರಪತಿಗಳಿಂದ ಪೊಲೀಸ್ ಪದಕ ಪಡೆದಿದ್ದರೆ.* ಬಿಸಿಸಿಐ ನಡೆಸುವ ಪದ್ಯಾವಳಿಗಳಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಂತೆ, ನ್ಯಾಯಯುತ ಪಂದ್ಯ ನಡೆಯುವಂತೆ ನೋಡಿಕೊಳ್ಳುವುದು, ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ ಸೇರಿದಂತೆ ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಬಲಪಡಿಸುವದು ಮುಖ್ಯಸ್ಥರ ಪ್ರಮುಖ ಜವಾಬ್ದಾರಿಯಾಗಿದೆ.