* ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಏರ್‌ಲಿಫ್ಟ್ ಮಾಡಬಹುದಾದ ಜಗತ್ತಿನ ಮೊದಲ ವಿಪತ್ತು ನಿರ್ವಹಣೆ ಆಸ್ಪತ್ರೆಯನ್ನು ಭಾರತ ಸಿದ್ಧಪಡಿಸಿದೆ.* ಭೀಷ್ಮ (ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ ಸಹಯೋಗ್ ಹಿತ ಆ್ಯಂಡ್ ಮೈತ್ರಿ) ಯೋಜನೆಯಡಿಲ್ಲಿ “ಆರೋಗ್ಯ ಮೈತ್ರಿ ಕ್ಯೂಬ್' ಅನ್ನು ಭಾರತ ಸಿದ್ಧಪಡಿಸಿದೆ.* ಬುಲೆಟ್‌ನಿಂದ ಗಾಯಗಳಾದ 40 ಮಂದಿ, ತೀವ್ರ ಗಾಯಗಳಾದ 25 ಮಂದಿ, ತೀವ್ರ ಸುಟ್ಟ ಗಾಯಗಳಾದ 25 ಮಂದಿ, ತಲೆಗೆ ಪೆಟ್ಟಾದ 10 ಮಂದಿ, ಮೂಳೆ ಮುರಿತ, ಎದೆಗೆ ಗಾಯ, ಬೆನ್ನು ಮೂಳೆಯ ಗಾಯ ಮತ್ತು ಮುರಿತಕ್ಕೆ ಸಂಬಂಧಿಸಿದಂತೆ ಏಕಕಾಲದಲ್ಲಿ ಚಿಕಿತ್ಸೆ ನೀಡಬಹುದಾಗಿದೆ.* "ಆರೋಗ್ಯ, ಮೈತ್ರಿ ಕ್ಯೂಬ್‌ನಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ, ಸಣ್ಣ ಐಸಿಯು, ವೆಂಟಿಲೇಟರ್, ರಕ್ತ ಪರೀಕ್ಷಾ ಸಾಧನ, ಎಕ್ಸ್ ರೇ ಮೆಷಿನ್, ಅಡುಗೆ ಮನೆ ಸೌಲಭ್ಯ, ಆಹಾರ, ನೀರು, ವಸತಿ, ಪವರ ಜನರೇಟರ್ ಮತ್ತು ಇತರ ಸೌಲಭ್ಯಗಳು "ಆರೋಗ್ಯ, ಮೈತ್ರಿ ಕ್ಯೂಬ್‌ನಲ್ಲಿ ಇರಲಿವೆ.