* ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ನ ಸದಸ್ಯರಾಗಿ ವರ್ಜೀನಿಯಾದಿಂದ ಆಯ್ಕೆಯಾದ ಭಾರತ ಮೂಲದ ಅಮೆರಿಕದ ಕಾಂಗ್ರೆಸ್ ಸದಸ್ಯ ಸುಹಾಸ್ ಸುಬ್ರಮಣ್ಯಂ ಅವರು ಭಗವದ್ಗೀತೆಯ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದಾರೆ.* ಮಾಜಿ ಅಧ್ಯಕ್ಷ ಒಬಾಮಾ ಅವರ ಮಾಜಿ ನೀತಿ ಸಲಹೆಗಾರರಾಗಿದ್ದ ಸುಬ್ರಹ್ಮಣ್ಯಂ ಅವರು 2019ರಲ್ಲಿ ಮೊದಲ ಬಾರಿಗೆ ವರ್ಜೀನಿಯಾದಿಂದ ಆಯ್ಕೆಯಾಗಿದ್ದರು.* ಟೋಲ್ ವೆಚ್ಚ ಇಳಿಕೆ, ಬಂದೂಕು ಹಿಂಸಾಚಾರ ತಡೆ, ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಶಿಕ್ಷಣಕ್ಕೆ ಪ್ರವೇಶ ಸೇರಿದಂತೆ ಸುಬ್ರಹ್ಮಣ್ಯಂ ಹಲವು ಶಾಸನಗಳನ್ನು ಜಾರಿಗೆ ತರಲು ಪ್ರಮುಖ ಪಾತ್ರವಹಿಸಿದ್ದಾರೆ.* ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಗೆ ಚುನಾಯಿತರಾದ ಮೊದಲ ಹಿಂದೂ ಅಮೇರಿಕನ್ ತುಳಸಿ ಗಬ್ಬಾರ್ಡ್ (43) ಅವರೂ ಕೂಡ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.* ಗಬ್ಬಾರ್ಡ್ ಅವರು ಚಿಕ್ಕ ವಯಸ್ಸಿನಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈಗ ಅವರು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶಕರಾಗಿದ್ದಾರೆ.