* ರಾಷ್ಟ್ರೀಯ ಗ್ರಂಥಾಲಯವಿರುವ ಕೋಲ್ಕತ್ತಾದ ಭಾಷಾ ಭವನವನ್ನು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಭವನ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಮರುನಾಮಕರಣ ಮಾಡಿದೆ.* ಭಾಷಾ ಭವನಕ್ಕೆ ಜುಲೈ 6ರಂದು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 123ನೇ ಜನ್ಮವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗ್ರಂಥಾಲಯದ ಸಲಹಾ ಸಮಿತಿಯು 19 ವರ್ಷ ಹಳೆಯ ಭಾಷಾಭವನಕ್ಕೆ ಮರುನಾಮಕರಣ ಮಾಡಲು ನಿರ್ಧರಿಸಲಾಯಿತ್ತು.* ಕೇಂದ್ರದ ಬಿಜೆಪಿ ಸರಕಾರವು ನಿರಂಕುಶವಾಗಿ ಕಟ್ಟಡಗಳ ಹೆಸರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬದಲಾಯಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಸಿಪಿಎಂ ಆರೋಪಿಸಿದೆ.