* DRDO ಸೋಮವಾರ (ಜನವರಿ 13) ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಮೂರನೇ ತಲೆಮಾರಿನ ದೇಶೀಯ ಯುದ್ಧ ಟ್ಯಾಂಕ್ ಪ್ರತಿಬಂಧಕ ಕ್ಷಿಪಣಿ, ನಾಗ್ ಎಂಕೆ-2, ಪರಿಕ್ಷಾರ್ಥ ಯಶಸ್ವಿಯಾಗಿ ನಡೆಸಿತು.* ರಾಜಸ್ಥಾನದ ಪ್ರೋಖಾನ್ ನಲ್ಲಿ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಕ್ಷಾರ್ಥ ಪ್ರಯೋಗ ನಡೆಸಲಾಗಿದ್ದು, ಕ್ಷಿಪಣಿಯು ನಿಗದಿತ ಎಲ್ಲ ಗುರಿಗಳನ್ನು ಹೊಡೆದುರುಳಿಸಿತು. ಎಂದು ರಕ್ಷಣಾ ಸಚಿವಾಲಯ ತಿಳಿಸಿತು.* ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಾಗ್ ಎಂಕೆ 2 ಶಸ್ತ್ರಾಸ್ತ್ರ ವ್ಯವಸ್ಥೆಯ ಯಶಸ್ವಿ ಪ್ರಯೋಗಗಳನ್ನು ಶ್ಲಾಘಿಸಿ, ಡಿಆರ್ಡಿಒ, ಭಾರತೀಯ ಸೇನೆ ಮತ್ತು ಉದ್ಯಮವನ್ನು ಅಭಿನಂದಿಸಿದರು.* " ಸಂಪೂರ್ಣ ಶಸ್ತ್ರಾಸ್ತ್ರ ವ್ಯವಸ್ಥೆಯು ಈಗ ಭಾರತೀಯ ಸೇನೆಗೆ ಸೇರ್ಪಡೆಗೆ ಸಿದ್ಧವಾಗಿದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.* ಡಿಆರ್ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್ ಅವರು ಸೇನೆಗೆ ಸೇರ್ಪಡೆಗಾಗಿ ಕ್ಷಿಪಣಿಯನ್ನು ಸಿದ್ಧಪಡಿಸಲು ಎಲ್ಲಾ ಪಾಲುದಾರರ ಪ್ರಯತ್ನಗಳನ್ನು ಶ್ಲಾಘಿಸಿದರು.