* ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ‘ಸಾಮುದಾಯ ಅಭಿವೃದ್ಧಿ ಯೋಜನೆ’ಗಳನ್ನು ಜಾರಿಗೆ ತರಲು ಭಾರತವು ನೇಪಾಳಕ್ಕೆ ₹62.5 ಕೋಟಿ ಆರ್ಥಿಕ ಸಹಾಯ ನೀಡಲಿದೆ. ಈ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು 10 ಒಪ್ಪಂದಗಳಿಗೆ ಸಹಿ ಹಾಕಿವೆ.* ಈ ಕುರಿತು ಭಾರತ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆ ನೀಡಿದ್ದು, "ನೇಪಾಳದಲ್ಲಿ ಮೂರು ಶಾಲೆಗಳು, ಒಂದು ಮಠ, ಒಂದು ಇ–ಗ್ರಂಥಾಲಯ ಹಾಗೂ ಎರಡು ಆಸ್ಪತ್ರೆಗಳ ನಿರ್ಮಾಣಕ್ಕೆ ಭಾರತ ನೆರವಳಿಸಿದೆ" ಎಂದು ತಿಳಿಸಿದೆ.* ಸಾಮುದಾಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಭಾರತವು ನೇಪಾಳದಲ್ಲಿ ಇದುವರೆಗೆ 573 ಯೋಜನೆಗಳನ್ನು ಕೈಗೊಂಡಿದ್ದು, ಇವುಗಳಲ್ಲಿ 495 ಯೋಜನೆಗಳು ಪೂರ್ಣಗೊಂಡಿವೆ.