* ಚಂದ್ರಯಾನ-3ರ ಯಶಸ್ಸಿನ ಬಳಿಕ ದೇಶದ ಬಾಹ್ಯಾ ಕ್ಷೇತ್ರದ ಆಯಾಮವೂ ಬದಲಾಗಿದೆ. ಅಮೆರಿಕದಲ್ಲಿ ಅಂತರಿಕ್ಷ ನೌಕೆಯ ಅಭಿವೃದ್ಧಿಯಲ್ಲಿ ತೊಡಗಿರುವ ಪರಿಣತರು ಬಾಹ್ಯಾಕಾಶ ತಂತ್ರಜ್ಞಾನ ಹಂಚಿಕೊಳ್ಳುವಂತೆ ಭಾರತಕ್ಕೆ ಕೋರಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್‌ ಹೇಳಿದ್ದಾರೆ.* ಭಾರತವು ಪ್ರಬಲ ರಾಷ್ಟ್ರವಾಗಿದೆ. ದೇಶದ ಜ್ಞಾನ ಮತ್ತು ಬುದ್ಧಿಶಕ್ತಿಯು ಇಡೀ ವಿಶ್ವದಲ್ಲಿಯೇ ಶ್ರೇಷ್ಠ ಸ್ಥಾನ ಪಡೆದಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಕಾಲಚಕ್ರ ಬದಲಾಗಿದ್ದು, ಭಾರತವು ಅತ್ಯುತ್ತಮ ಉಪಕರಣಗಳು ಮತ್ತು ರಾಕೆಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಶಕ್ತವಾಗಿದೆ ಎಂದು ಅವರು ಹೇಳಿದ್ದಾರೆ.* 'ಜೆಪಿಎಲ್' ಎಂಬುದು ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯವಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾನಾ ಅಡಿಯಲ್ಲಿ ಕಾರ್ಯನಿರ್ವಹಿಸುವ ಇದನ್ನು ಕ್ಯಾಲಿಫೋರ್ನಿಯಾ ಇನ್‌ ಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ನಿರ್ವಹಣೆ ಮಾಡುತ್ತದೆ.