* ರಷ್ಯಾ ಭಾರತಕ್ಕೆ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಭಾರತಕ್ಕೆ ಕಚ್ಚಾ ತೈಲ ಪೂರೈಸುವ ರಾಷ್ಟ್ರಗಳಲ್ಲಿ ರಷ್ಯಾ ಮುಂದುವರೆಯುವ ದಿನಗಳಲ್ಲಿಯೂ ಅಗ್ರ ಸ್ಥಾನದಲ್ಲೇ ಉಳಿಯಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.* ಸೆಪ್ಟೆಂಬರ್ನಲ್ಲಿ ರಷ್ಯಾದಿಂದ ತೈಲ ಆಮದು ಸ್ವಲ್ಪ ಕುಸಿತ ಕಂಡರೂ, ದೇಶದ ಒಟ್ಟು ತೈಲ ಖರೀದಿಯಲ್ಲಿ ರಷ್ಯಾದ ಪಾಲು ಮೂರನೇ ಒಂದು ಭಾಗದಷ್ಟೇ ಉಳಿದಿದೆ.* ಅಮೆರಿಕದ ಒತ್ತಡದ ನಡುವೆಯೂ ಭಾರತವು ರಷ್ಯಾದಿಂದ ಖರೀದಿ ಮುಂದುವರಿಸಿದೆ.* ಕೆಪ್ಲರ್ ವರದಿ ಪ್ರಕಾರ, ಭಾರತ ಪ್ರತಿ ದಿನ 47 ಲಕ್ಷ ಬ್ಯಾರೆಲ್ಗಳಷ್ಟು ಕಚ್ಚಾ ತೈಲ ಖರೀದಿಸುತ್ತಿದ್ದು, ಅದರಲ್ಲಿ 16 ಲಕ್ಷ ಬ್ಯಾರೆಲ್ ರಷ್ಯಾದಿಂದ ಆಗಿದೆ.* ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಅಮೆರಿಕ ಕ್ರಮವಾಗಿ ಮುಂದಿನ ಪೂರೈಕೆದಾರ ರಾಷ್ಟ್ರಗಳಾಗಿವೆ.* ರಷ್ಯಾ–ಉಕ್ರೇನ್ ಯುದ್ಧಕ್ಕೂ ಮೊದಲು ಭಾರತವು ರಷ್ಯಾದಿಂದ ಕೇವಲ ಶೇ 1ರಷ್ಟು ತೈಲವನ್ನು ಮಾತ್ರ ಖರೀದಿಸುತ್ತಿತ್ತು. ಆದರೆ ಯುದ್ಧ ಆರಂಭವಾದ ನಂತರ ಈ ಪ್ರಮಾಣವು ಶೇ 40ಕ್ಕೆ ಏರಿಕೆಯಾಗಿದೆ.