* ಭಾರತಕ್ಕೆ 2 ಬುಲೆಟ್ ರೈಲುಗಳನ್ನು ಉಡುಗೊರೆಯಾಗಿ ನೀಡಲು ಜಪಾನ್ ನಿರ್ಧರಿಸಿದೆ ಎಂದು “ದ ಜಪಾನ್ ಟೈಮ್ಸ್’ ಮಂಗಳವಾರ(ಏಪ್ರಿಲ್ 15) ವರದಿ ಮಾಡಿದೆ. ಅದರಂತೆ ಜಪಾನಿನ ಬುಲೆಟ್ ರೈಲುಗಳಾದ ಶಿನ್ಕಾನ್ಸೆನ್ ಇ5 ಹಾಗೂ ಇ3 ಸರಣಿಯ ರೈಲುಗಳು ಭಾರತಕ್ಕೆ ಬರಲಿವೆ.* ಮುಂಬಯಿ-ಅಹ್ಮದಾಬಾದ್ ಕಾರಿಡಾರ್ನ ಪರೀಕ್ಷೆಯ ಸಹಾಯಕ್ಕಾಗಿ ಜಪಾನ್ ಈ ಕ್ರಮ ಕೈಗೊಂಡಿದೆ.* ಈ ಕಾರಿಡಾರ್ನಲ್ಲಿ ಅಗತ್ಯ ತಪಾಸಣಾ ಉಪಕರಣಗಳನ್ನು ಅಳವಡಿಸಿದ ಕೂಡಲೇ, ಈ ರೈಲುಗಳು 2026ರ ಆರಂಭದಲ್ಲಿ ಭಾರತಕ್ಕೆ ಬರುವ ನಿರೀಕ್ಷೆಯಿದೆ.* ಇಲ್ಲಿನ ತಾಪಮಾನ, ಧೂಳಿನಂತಹ ನೈಸರ್ಗಿಕ ಸವಾಲುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ರೈಲುಗಳು ಕಲೆ ಹಾಕಲಿವೆ. 2030ರ ವೇಳೆಗೆ ಇ10 ಸರಣಿಯ ರೈಲುಗಳು ಭಾರತಕ್ಕೆ ಬರಲು ಸಜ್ಜಾಗಿದೆ.* ಇ3 ಹಾಗೂ ಇ5 ರೈಲುಗಳ ಕಾರ್ಯಾಚರಣೆ ಪರೀಕ್ಷಿಸಿ, ಇ10 ರೈಲುಗಳನ್ನು ವಿನ್ಯಾಸಗೊಳಿಸಲು ಭಾರತ ಹಾಗೂ ಜಪಾನ್ ನಿರ್ಧರಿಸಿವೆ.* ಪ್ರಸ್ತುತ ಮುಂಬಯಿ- ಅಹ್ಮದಾ ಬಾದ್ ಕಾರಿಡಾರ್ನ ನಿರ್ಮಾಣ ಕಾರ್ಯ ಸಕ್ರಿಯವಾಗಿದ್ದು, ಗುಜರಾತ್ನಲ್ಲಿ ಹಲವು ನಿಲ್ದಾಣಗಳ, ಮೂಲಸೌಕರ್ಯಗಳ ನಿರ್ಮಾಣ ನಡೆಯುತ್ತಿದೆ.