* ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಸಮೀಕ್ಷೆಯ ಪ್ರಕಾರ ಭಾರತವು ಗಂಭೀರವಾದ ಹವಾಮಾನ ವೈಪರೀತ್ಯಗಳನ್ನು ಎದುರಿಸುತ್ತಿದ್ದು, ಜಾಗತಿಕವಾಗಿ 7ನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.* 2024ರಲ್ಲಿ ಶೇ.93ರಷ್ಟು ದಿನಗಳು ಉಷ್ಣದ ಅಲೆಗಳು, ಚಂಡಮಾರುತಗಳು ಹಾಗೂ ಪ್ರವಾಹಗಳಂತಹ ಹವಾಮಾನ ವೈಪರೀತಿಗಳಿಂದ ಕೂಡಿದ್ದವು, ಕೃಷಿ, ಆಹಾರ, ಹಣದುಬ್ಬರ ಮತ್ತು ಸಾಮಾಜಿಕ ಸ್ಥಿರತೆಗೆ ಅಡ್ಡಿ ಉಂಟು ಮಾಡಿವೆ. ಇದರಿಂದ ಭಾರತದ ಜಿಡಿಪಿಗೆ ಶೇ.3ರಿಂದ 10ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.* 2024ನ್ನು ಅತ್ಯಂತ ಬಿಸಿ ವರ್ಷವೆಂದು ಘೋಷಿಸಲಾಗಿದೆ. ಭಾರತ ಹವಾಮಾನ ವೈಪರೀತ್ಯದ ಸವಾಲುಗಳನ್ನು, ಸಮುದ್ರ ಮಟ್ಟ ಏರಿಕೆ, ಜೀವವೈವಿಧ್ಯ ನಾಶ, ನೀರಿನ ಅಭಾವದಂತಹ ಸಮಸ್ಯೆಗಳೊಂದಿಗೆ ಎದುರಿಸುತ್ತಿದೆ. ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲೇಬೇಕಿದೆ.* ಹವಾಮಾನ ಬದಲಾವಣೆಯು ಗ್ರಾಮೀಣ ಮಹಿಳೆಯರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ, ವಿಶೇಷವಾಗಿ ಕೃಷಿ ಮತ್ತು ಕಿರು ಉದ್ಯಮಗಳಲ್ಲಿ. ಪರ್ಯಾಯ ಜೀವನೋಪಾಯಕ್ಕಾಗಿ ಸ್ವ-ಸಹಾಯ ಗುಂಪುಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಆದರೆ, ಹವಾಮಾನ ವೈಪರೀತ್ಯವು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಅಭಿವೃದ್ಧಿಗೆ ಅಡ್ಡಿ ಉಂಟುಮಾಡುವುದಾಗಿ ಸಮೀಕ್ಷೆ ಸೂಚಿಸಿದೆ.