* ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಿಂದ ಇರಾನ್ ಸರ್ಕಾರವು  ಫೆಬ್ರುವರಿ ಯಲ್ಲಿ ಭಾರತೀಯ ಪ್ರವಾಸಿಗರಿಗೆ ವೀಸಾ-ಮುಕ್ತ  ಪ್ರವೇಶವನ್ನು ಘೋಷಿಸಿದೆ.* ವೀಸಾ ಇಲ್ಲದೆಯೇ ಭಾರತೀಯರ ಪ್ರವೇಶಕ್ಕೆ ಅವಕಾಶ ನೀಡಿದ ದೇಶಗಳ ಸಾಲಿನಲ್ಲಿ ಇದೀಗ ಇರಾನ್ ದೇಶವು ಕೂಡಾ ಸೇರ್ಪಡೆಯಾಗಿದೆ. * ಇರಾನ್ 2023 ರ ಡಿಸೆಂಬರ್‌ನಲ್ಲೇ ವೀಸಾ ವಿನಾಯಿತಿ ಯೋಜನೆಯನ್ನು ಪ್ರಕಟಿಸಲಾಗಿತ್ತು . ಭಾರತ ಮಾತ್ರವಲ್ಲದೆ  ಇತರ 32 ದೇಶಗಳಿಗೂ ಈ ಸೌಲಭ್ಯವನ್ನು ಕಲ್ಪಸಿದೆ . ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಜಗತ್ತಿನಾದ್ಯಂತದಿಂದ ಪ್ರವಾಸಿಗರನ್ನು ಸೆಳೆಯುವುದು ಈ ವಿನಾಯಿತಿಯ ಉದ್ದೇಶವಾಗಿದೆ . * ಭಾರತೀಯ ಪ್ರವಾಸಿಗರು ಇನ್ನುಮುಂದೆ ವೀಸಾ ಇಲ್ಲದೆಯೇ ಗರಿಷ್ಠ 15 ದಿನಗಳವರೆಗೆ ಇರಾನ್‌ನಲ್ಲಿ ವಾಸಿಸಬಹುದು. ವೀಸಾ ಮುಕ್ತ ಪ್ರವೇಶವನ್ನು ಬಯಸುವ ಭಾರತೀಯ ಪ್ರವಾಸಿಗರು ಖಡ್ಡಾಯವಾಗಿ ನಾಲ್ಕು ರೀತಿಯ ಷರತ್ತುಗಳನ್ನು ಪಾಲಿಸಬೇಕು.1)ರಾಜತಾಂತ್ರಿಕವಲ್ಲದ ಸಾಮಾನ್ಯ ಪಾಸ್ ಪೋರ್ಟ್ ಹೊಂದಿರಬೇಕು .2)ವಿಮಾನ ಪ್ರಯಾಣದ ಮೂಲಕವೇ ಇರಾನ್ ಗೆ ಆಗಮಿಸಬೇಕು .3)ಪ್ರವಾಸ ಉದ್ದೇಶಕ್ಕೆ ಮಾತ್ರ ಉಳಿದುಕೊಳ್ಳಬೇಕು .4)ಪ್ರತಿ 6 ತಿಂಗಳಲ್ಲಿ15 ದಿನ ಮಾತ್ರ ವಾಸ್ತವ್ಯ. * ಭಾರತೀಯ ಪ್ರವಾಸಿಗರು 15 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸಿದರೆ ಅಥವಾ ಆರು ತಿಂಗಳ ಅವಧಿಯಲ್ಲಿ ಹೆಚ್ಚು ನಮೂದುಗಳನ್ನು ಮಾಡಲು ಬಯಸಿದರೆ ಅವರು ಭಾರತದಲ್ಲಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಆಯಾ ಪ್ರಾತಿನಿಧ್ಯಗಳ ಮೂಲಕ ಅಗತ್ಯ ವೀಸಾಗಳನ್ನು ಪಡೆಯಬೇಕು.*  ವೀಸಾ ವಿನಾಯಿತಿಯು ವಾಯು ಗಡಿಗಳ ಮೂಲಕ ಇರಾನ್‌ಗೆ ಪ್ರವೇಶಿಸುವ ಭಾರತೀಯ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ.* ಪ್ರಸ್ತುತ 27 ದೇಶಗಳು ಭಾರತೀಯ ಪ್ರಜೆಗಳು ವೀಸಾ ಇಲ್ಲದೆ ಪ್ರವೇಶಿಸುವುದಕ್ಕೆ ಅನುಮತಿ ನೀಡಿದೆ .ಮಲೇಷ್ಯಾ ,ಶ್ರೀಲಂಕಾ ,ಥಾಯ್ಲೆಂಡ್ ,ಕೆನ್ಯಾ,ಇಂಡೋನೇಷ್ಯಾ, ವಿಯೆಟ್ನಾಂ,ಬಾರ್ಬಡೋಸ್ ,ಭೂತಾನ್ ,ಡೊಮಿನಿಕಾ ,ಹೈಟಿ ,ಮಾಲ್ಡೀವ್ಸ, ಮಾರಿಷಸ್,ನೇಪಾಳ ,ಸಮೋವಾ ಮತ್ತು ಟ್ರಿನಿಡಾಡ್ -ಟೊಬ್ಯಾಗೋ ಇವುಗಳಲ್ಲಿ ಸೇರಿವೆ.