Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತೀಯ ವಾಯುಪಡೆಯ ನೂತನ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ನಾಗೇಶ್ ಕಪೂರ್ ಅಧಿಕಾರ ಸ್ವೀಕಾರ!
2 ಜನವರಿ 2026
* ಭಾರತೀಯ ವಾಯುಪಡೆಯ (IAF) ಮಹತ್ವದ ಹುದ್ದೆಯಾದ
ಉಪ ವಾಯು ಸೇನಾ ಮುಖ್ಯಸ್ಥರಾಗಿ (Vice Chief of the Air Staff - VCAS)
ಏರ್ ಮಾರ್ಷಲ್
ನಾಗೇಶ್ ಕಪೂರ್
ಅವರು ಜನವರಿ 1, 2026ರಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ನಾಲ್ಕು ದಶಕಗಳ ಸುದೀರ್ಘ ಸೇವೆಯ ನಂತರ ನಿವೃತ್ತರಾದ ಏರ್ ಮಾರ್ಷಲ್ ನರ್ಮದೇಶ್ವರ್ ತಿವಾರಿ ಅವರ ಸ್ಥಾನವನ್ನು ಇವರು ಅಲಂಕರಿಸಿದ್ದಾರೆ.
* ದೆಹಲಿಯ
ವಾಯು ಭವನದಲ್ಲಿ
ಅವರು ಉಪ ವಾಯು ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರಿಗೆ ಗೌರವ ವಂದನೆ (Guard of Honour) ಸಲ್ಲಿಸಲಾಯಿತು. ಬಳಿಕ ಅವರು
ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ
ತೆರಳಿ ವೀರ ಸೈನಿಕರಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
* ಎಯರ್ ಮಾರ್ಷಲ್ ನಾಗೇಶ್ ಕಪೂರ್ ಅವರು
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA)
ಯ ಪದವೀಧರರಾಗಿದ್ದು, ಡಿಸೆಂಬರ್ 1985ರಲ್ಲಿ ಪದವಿ ಪಡೆದು, ಡಿಸೆಂಬರ್ 6, 1986ರಂದು ವಾಯುಪಡೆಯ
ಫೈಟರ್ ಸ್ಟ್ರೀಮ್
ನಲ್ಲಿ ಆಯೋಗಿತರಾದರು. ಅವರು ಒಬ್ಬ ನಿಪುಣ
ಫೈಟರ್ ಪೈಲಟ್
, ಅರ್ಹ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಹಾಗೂ ಫೈಟರ್ ಕಂಬಾಟ್ ಲೀಡರ್ ಆಗಿದ್ದಾರೆ. ಮಿಗ್–21 ಮತ್ತು ಮಿಗ್–29 ವಿಮಾನಗಳ ಎಲ್ಲಾ ರೂಪಾಂತರಗಳನ್ನು ಹಾರಿಸಿದ ಅನುಭವ ಅವರಿಗೆ ಇದೆ. ತಮ್ಮ ವಿಶಿಷ್ಟ ವಾಯುಯಾನ ವೃತ್ತಿಜೀವನದಲ್ಲಿ ಅವರು
3,400 ಗಂಟೆಗೂ ಹೆಚ್ಚು
ಕಾರ್ಯಾಚರಣಾ ಮತ್ತು ತರಬೇತಿ ಹಾರಾಟ ನಡೆಸಿದ್ದಾರೆ.
* ಅವರ ಕಾರ್ಯಾಚರಣಾ ಹುದ್ದೆಗಳಲ್ಲಿ ಕೇಂದ್ರ ವಲಯದ ಫೈಟರ್ ಸ್ಕ್ವಾಡ್ರನ್ನ ಕಮಾಂಡಿಂಗ್ ಅಧಿಕಾರಿ, ಪಶ್ಚಿಮ ವಲಯದ ಮುಂಚೂಣಿ ವಿಮಾನ ನೆಲೆಯ ಸ್ಟೇಷನ್ ಕಮಾಂಡರ್ ಹಾಗೂ ಪ್ರಮುಖ ವಾಯು ನೆಲೆಯ ಏರ್ ಆಫೀಸರ್ ಕಮಾಂಡಿಂಗ್ ಹುದ್ದೆಗಳು ಸೇರಿವೆ. ತರಬೇತಿ ಕ್ಷೇತ್ರದಲ್ಲಿ ಅವರು ವಾಯುಪಡೆ ಅಕಾಡೆಮಿಯ
ಚೀಫ್ ಇನ್ಸ್ಟ್ರಕ್ಟರ್ (ಫ್ಲೈಯಿಂಗ್)
ಹಾಗೂ ವೆಲ್ಲಿಂಗ್ಟನ್ನ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನಲ್ಲಿ
ಡೈರೆಕ್ಟಿಂಗ್ ಸ್ಟಾಫ್
ಆಗಿ ಸೇವೆ ಸಲ್ಲಿಸಿದ್ದಾರೆ. ವಾಯುಪಡೆ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ,
PC-7 Mk II ತರಬೇತಿ ವಿಮಾನಗಳ
ಸೇರ್ಪಡೆಅವರು ಪಾಕಿಸ್ತಾನದಲ್ಲಿ
ರಕ್ಷಣಾ ಅಟ್ಯಾಶೆ (Defence Attaché)
ಆಗಿಯೂ ರಾಜತಾಂತ್ರಿಕ ಸೇವೆ ಸಲ್ಲಿಸಿದ್ದಾರೆ. ಅವರ ಪ್ರಮುಖ ಸಿಬ್ಬಂದಿ ಹುದ್ದೆಗಳಲ್ಲಿ ಏರ್ ಹೆಡ್ಕ್ವಾರ್ಟರ್ಸ್ನ
ಸಹಾಯಕ ವಾಯು ಸೇನಾ ಮುಖ್ಯಸ್ಥ (ಆಪರೇಷನ್ಸ್–ಸ್ಟ್ರಾಟಜಿ)
, ದಕ್ಷಿಣ ಪಶ್ಚಿಮ ವಾಯು ಕಮಾಂಡ್ನ ಏರ್ ಡಿಫೆನ್ಸ್ ಕಮಾಂಡರ್, ಕೇಂದ್ರ ವಾಯು ಕಮಾಂಡ್ನ ಹಿರಿಯ ಏರ್ ಸ್ಟಾಫ್ ಅಧಿಕಾರಿ ಹಾಗೂ ಏರ್ ಹೆಡ್ಕ್ವಾರ್ಟರ್ಸ್ನ
ಪರ್ಸನಲ್ ವಿಭಾಗದ ಮುಖ್ಯಾಧಿಕಾರಿ
ಹುದ್ದೆಗಳು ಸೇರಿವೆ.
* ಉಪ ವಾಯು ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಮೊದಲು, ಅವರು ಟ್ರೈನಿಂಗ್ ಕಮಾಂಡ್ನ ಏರ್ ಆಫೀಸರ್ ಕಮಾಂಡಿಂಗ್–ಇನ್–ಚೀಫ್ ಹಾಗೂ ನಂತರ ದಕ್ಷಿಣ ಪಶ್ಚಿಮ ವಾಯು ಕಮಾಂಡ್ನ ಏರ್ ಆಫೀಸರ್ ಕಮಾಂಡಿಂಗ್–ಇನ್–ಚೀಫ್ ಆಗಿ ಸೇವೆ ಸಲ್ಲಿಸಿದ್ದರು.
* ಎಯರ್ ಮಾರ್ಷಲ್ ನಾಗೇಶ್ ಕಪೂರ್ ಅವರ ಮಹತ್ತರ ಸೇವೆಗೆ ರಾಷ್ಟ್ರಪತಿಗಳ ಗೌರವಗಳು :
=> ವಾಯು ಸೇನಾ ಪದಕ (Vayu Sena Medal) – 2008
=> ಅತಿ ವಿಶಿಷ್ಟ ಸೇವಾ ಪದಕ (Ati Vishisht Seva Medal) – 2022
=> ಪರಮ ವಿಶಿಷ್ಟ ಸೇವಾ ಪದಕ (Param Vishisht Seva Medal) ಮತ್ತು ಸರ್ವೋತ್ತಮ ಯುದ್ಧ ಸೇವಾ ಪದಕ (Sarvottam Yudh Seva Medal) – 2025
Take Quiz
Loading...