* ಭಾರತ ದೇಶದ ಹೆಮ್ಮೆ ಎನಿಸಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಭಿವೃದ್ಧಿಪಡಿಸಿದ ಮೊದಲ ಲಘು ಯುದ್ಧವಿಮಾನಗಳ ವರ್ಗಕ್ಕೆ  'ತೇಜಸ್ ತರಬೇತಿ' ವಿಮಾನವನ್ನು ಭಾರತೀಯ ವಾಯುಪಡೆಗೆ ಅಕ್ಟೋಬರ್ 4 ರಂದು ಹಸ್ತಾಂತರಿಸಲಾಗಿದೆ. * ಎಲ್‌ಸಿಎ ತೇಜಸ್ ಅವಳಿ ಆಸನವು ಹಗುರವಾದ, ಎಲ್ಲಾ ಹವಾಮಾನಕ್ಕೆ  ಹೊಂದಿಕೊಳ್ಳುವ ಮಲ್ಟಿಪಲ್‌ ರೋಲ್‌ನ 4.5 ಪೀಳಿಗೆಯ ವಿಮಾನವಾಗಿದೆ.* ಭಾರತೀಯ ವಾಯುಪಡೆಯು 1.15 ಲಕ್ಷ ಕೋಟಿ ರೂ. ವೆಚ್ಚದಲ್ಲಿ 97 ತೇಜಸ್ ಮಾರ್ಕ್ 1ಎ ವಿಮಾನಗಳನ್ನು ಎಚ್‌ಎಎಲ್‌ನಿಂದ ಖರೀದಿಸಲಿದೆ ಎಂದು ಏರ್ ಚೀಫ್ ಮಾರ್ಷಲ್ ವಿ.ಅರ್. ಚೌಧರಿ ಅವರು ತಿಳಿಸಿದ್ದಾರೆ.* ಭಾರತೀಯ ವಾಯುಪಡೆಗೆ 2023 - 24ನೇ ಸಾಲಿನಲ್ಲಿ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ 8 ಎಲ್‌ಸಿಎ ತೇಜಸ್‌ ವಿಮಾನಗಳನ್ನು ವಾಯುಪಡೆಗೆ ಪೂರೈಸಲಿದೆ. 2026 - 27ನೇ ಸಾಲಿನಲ್ಲಿ ಉಳಿದ 10 ಯುದ್ಧ ವಿಮಾನಗಳನ್ನು ಎಚ್‌ಎಎಲ್‌ ಪೂರೈಸಲಿದೆ.* ಭಾರತೀಯ ವಾಯುಪಡೆ 83 ತೇಜಸ್ ಮಾರ್ಕ್-1ಎ ಯುದ್ಧ ವಿಮಾನಗಳಿಗೆ ಆದೇಶ ಸಲ್ಲಿಸಿದ್ದು, ಅವುಗಳಲ್ಲಿ 73 ಯುದ್ಧ ವಿಮಾನಗಳಾದರೆ, 10 ತರಬೇತಿ ವಿಮಾನಗಳಾಗಿವೆ.* ಇಬ್ಬರು ಕುಳಿತುಕೊಳ್ಳಬಹುದಾದ 18 ಎಲ್‌ಸಿಎ ತೇಜಸ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಎಚ್‌ಎಎಲ್‌ ಪೂರೈಸುವ ಬಗ್ಗೆ ಈ ಹಿಂದೆಯೇ ಒಪ್ಪಂದ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ಮೊದಲ ಎಲ್‌ ಸಿಎ ತೇಜಸ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ.