* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಲ್ಲಿ ತಯಾರಾಗುವ ಉತ್ಪನ್ನಗಳ ಮೇಲೆ ಶೇ 26ರಷ್ಟು ಪ್ರತಿ ಸುಂಕ ವಿಧಿಸುವಂತೆ ಬುಧವಾರ(ಏಪ್ರಿಲ್ 02) ಆದೇಶ ಹೊರಡಿಸಿದ್ದಾರೆ.* ಈ ಸುಂಕ ಏಪ್ರಿಲ್ 9ರಿಂದಲೇ ಜಾರಿಯಾಗಲಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.* "ಭಾರತ ನಮ್ಮ ಉತ್ಪನ್ನಗಳ ಮೇಲೆ ಶೇ 52ರಷ್ಟು ತೆರಿಗೆ ಹಾಕುತ್ತಿದೆ. ಆದರೆ ನಾವು ದಶಕಗಳಿಂದ ಯಾವುದೇ ತೆರಿಗೆ ವಿಧಿಸುತ್ತಿಲ್ಲ" ಎಂದು ಈ ಘೋಷಣೆಯ ವೇಳೆ ಟ್ರಂಪ್ ಹೇಳಿದರು.* ಈ ಸುಂಕವು ತೆರಿಗೆ ಮಾತ್ರವಲ್ಲ, ತೆರಿಗೆಯೇತರ ನಿರ್ಬಂಧಗಳ ಮೇಲೂ ಅನ್ವಯವಾಗುತ್ತದೆ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ.* ಭಾರತ ಅಮೆರಿಕದ ವಿರುದ್ಧ ಗಂಭೀರ ತೆರಿಗೆಯೇತರ ನಿರ್ಬಂಧಗಳನ್ನು ವಿಧಿಸಿದೆ. ಅವುಗಳನ್ನು ತೆರವುಗೊಳಿಸಿದರೆ, ಅಮೆರಿಕದ ರಫ್ತು ವರ್ಷಕ್ಕೆ $5.3 ಬಿಲಿಯನ್ ಹೆಚ್ಚಾಗಬಹುದು ಎಂದು ಶ್ವೇತಭವನ ಹೇಳಿದೆ.* ಟ್ರಂಪ್ ಪರಿಹಾರಕಾರಕ ಎಂದು ನಿರ್ಧರಿಸುವವರೆಗೆ ಈ ಸುಂಕಗಳು ಜಾರಿಯಲ್ಲೇ ಇರುತ್ತವೆ, ಎಂಬುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.* ಅಮೆರಿಕ ಮತ್ತು ಭಾರತದ ನಡುವೆ $46 ಬಿಲಿಯನ್ ಮೌಲ್ಯದ ವ್ಯಾಪಾರ ಕೊರತೆ ಇದೆ.