* ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದ ಗ್ರೇಡಿಂಗ್ ವ್ಯವಸ್ಥೆ ರದ್ದು ಪಡಿಸಲಾಗಿದೆ ಎಂದು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಹೇಳಿದೆ.* ಗ್ರೇಡಿಂಗ್ ವ್ಯವಸ್ಥೆ ಬದಲಾಗಿ ವಿಶ್ವ ವಿದ್ಯಾಲಯಗಳನ್ನು ಮಾನ್ಯತೆ ಪಡೆದ ಅಥವಾ ಪಡೆಯದ ಎಂದು ಟ್ಯಾಗ್ ಮಾಡುವ ಮೂಲಕ ಬೈನರಿ ಮಾನ್ಯತೆ ಪ್ರಕ್ರಿಯೆಯನ್ನು ಆರಿಸಿಕೊಂಡಿದೆ.* ಇತ್ತೀಚೆಗೆ ನಡೆದ ನ್ಯಾಕ್ ಕಾರ್ಯಕಾರಿ ಮಂಡಳಿ ಸಭೆ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಸಭೆಯಲಿ ಹಲವು ಹೊಸ ಸುಧಾರಣೆಗಳನ್ನು ಎರಡು ಹಂತಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಯಿತು. ಬೈನರಿ ಮಾನ್ಯತೆ (ಮಾನ್ಯತೆ ಪಡೆದ ಅಥವಾ ಮಾನ್ಯತೆ ಪಡೆದಿಲ್ಲ) ವ್ಯವಸ್ಥೆಯು ಮುಂದಿನ ನಾಲ್ಕು ು ತಿಂಗಳಲ್ಲಿ ಜಾರಿಗೆ ಬರಲಿದೆ ಮತ್ತು ಮೆಚೂರಿಟಿ ನ ಆಧಾರಿತ ಗ್ರೇಡೆಡ್ ಅಕ್ರೆಡಿಟೇಶನ್ (ಹಂತಗಳು 1 ರಿಂದ 5) ಡಿಸೆಂಬರ್ ವೇಳೆಗೆ ಜಾರಿಗೆ ಬರಲಿದೆ. * ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ 5 ಸೃಷ್ಟಿಸಲು ಎಲ್ಲಾ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಈ ಗ್ರೇಡ್‌ಗಳ ಬದಲು ಬೈನರಿ ಮಾನ್ಯತೆ ಇರುತ್ತದೆ ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.