* ಹಿರಿಯ ಲೆಗ್ ಸ್ಪಿನ್ನರ್ ಹಾಗೂ ವಿಶ್ವಕಪ್ ವಿಜೇತ ತಂಡದ ಸದಸ್ಯ ಪಿಯೂಷ್ ಚಾವ್ಲಾ ಅವರು ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 36 ವರ್ಷದ ಈ ಬೌಲರ್ ಜೂನ್ 6 ರಂದು ತನ್ನ ನಿವೃತ್ತಿಯ ಘೋಷಣೆ ನೀಡಿದ್ದಾರೆ.* ನಿವೃತ್ತಿ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪ್ರಕಟಣೆಯಲ್ಲಿ, ಚಾವ್ಲಾ ತಮ್ಮ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ಐಪಿಎಲ್ ಫ್ರಾಂಚೈಸಿಗಳಿಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.* 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ತಂಡದಲ್ಲಿ ಚಾವ್ಲಾ ಇದ್ದರು. ಅವರು ಭಾರತ ಪರ ಮೂರು ಟೆಸ್ಟ್, 25 ಏಕದಿನ ಮತ್ತು ಏಳು ಟಿ20 ಪಂದ್ಯಗಳಲ್ಲಿ ಆಡಿದ್ದು, ಒಟ್ಟು 43 ವಿಕೆಟ್ ಪಡೆದಿದ್ದಾರೆ.* ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಣೆಯನ್ನು ಹಂಚಿಕೊಂಡಿರುವ ಚಾವ್ಲಾ, “ಈ ಅಧ್ಯಾಯವನ್ನು ಕೃತಜ್ಞತೆಯಿಂದ ಮುಕ್ತಾಯಗೊಳಿಸುತ್ತಿದ್ದೇನೆ. ಕ್ರಿಕೆಟ್ನ ಎಲ್ಲಾ ರೂಪಗಳಿಂದ ನಿವೃತ್ತಿ ಹೊಂದುತ್ತಿದ್ದೇನೆ. ಈ ಅಸಾಧಾರಣ ಪ್ರಯಾಣದಲ್ಲಿ ನೀಡಿದ ಬೆಂಬಲಕ್ಕೆ ಎಲ್ಲರಿಗೂ ಧನ್ಯವಾದಗಳು” ಎಂದು ತಿಳಿಸಿದ್ದಾರೆ.* ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಪಾಲು ಪಂದ್ಯಗಳನ್ನು ಆಡದಿದ್ದರೂ, ಚಾವ್ಲಾ ಐಪಿಎಲ್ನಲ್ಲಿ ಭರ್ಜರಿ ಸಾಧನೆ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರವಾಗಿ ಅವರು ಆಡಿದ್ದು, ಐಪಿಎಲ್ನಲ್ಲಿ ಒಟ್ಟು 194 ವಿಕೆಟ್ ಕಿತ್ತಿದ್ದಾರೆ.* ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರರಲ್ಲಿ ಚಾವ್ಲಾ ಎರಡನೇ ಸ್ಥಾನದಲ್ಲಿದ್ದಾರೆ. 2014ರಲ್ಲಿ ಕೋಲ್ಕತ್ತಾ ತಂಡದಲ್ಲಿ ಇದ್ದಾಗ ಅವರು ಕೆಕೆಆರ್ಗೆ ಚಾಂಪಿಯನ್ ಪಟ್ಟ ಪಡೆಯಲು ನೆರವಾದರು.