Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತೀಯ ಸೇನೆಯಲ್ಲಿ ‘ರುದ್ರ-ಭೈರವ’ ಯೋಧರ ತಂಡದ ಸೇರ್ಪಡೆ
25 ಅಕ್ಟೋಬರ್ 2025
* ಭಾರತೀಯ ಸೇನೆಯು 'ರುದ್ರ' ಬ್ರಿಗೇಡಗಳು ಮತ್ತು 'ಭೈರವ' ಕಮಾಂಡೋ ಬೆಟಾಲಿಯನಗಳನ್ನು ಒಳಗೊಂಡಂತೆ ಹೊಸ ಘಟಕಗಳನ್ನು ಪರಿಚಯಿಸುತ್ತಿದೆ.ಇದು ಭಾರತೀಯ ಸೇನೆಯ ಪುನರಚನೆ ಮತ್ತು ಆಧುನೀಕರಣ ಭಾಗವಾಗಿದೆ.ಭವಿಷ್ಯದ ಯುದ್ಧಗಳ ಸವಾಲುಗಳನ್ನು ಎದುರಿಸಲು ಈ ಘಟಕಗಳು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳನ್ನು ಬಳಸುತ್ತವೆ.
ರುದ್ರ ಬ್ರಿಗೇಡಗಳು :
* ಇವುಗಳು ಸೇನೆಯಲ್ಲಿ ಸಂಯೋಜಿತ ಶಸ್ತ್ರಾಸ್ತ್ರ ಹೋರಾಟದ ಒಂದು ಹೊಸ ರಚನೆಯಾಗಿದ್ದು,2018 ರಲ್ಲಿ ಪ್ರಾರಂಭವಾದ ಪುನರಚನೆಯ ಭಾಗವಾಗಿದೆ.
* ಈಗಾಗಲೇ ಉತ್ತರ ಗಡಿಯಲ್ಲಿ ಒಂದು ಹಾಗೂ ಪಶ್ಚಿಮ ಗಡಿಯಲ್ಲಿ ಇನ್ನೊಂದು ರುದ್ರ ಬ್ರಿಗೇಡ್ ನಿಯೋಜಿಸಲಾಗಿದೆ. ಈ ಬ್ರಿಗೇಡಗಳಲ್ಲಿ ಎಲ್ಲ ವಿವಿಧ ತುಕಡಿಗಳು ಇರುವದರಿಂದ ಶ್ರೀಘ್ರವಾಗಿ ಯುದ್ಧಕ್ಕೆ ಸಿದ್ಧತೆ ನಡೆಸಿ ಅನಿರೀಕ್ಷಿತ ದಾಳಿಗಳನ್ನು ತಡೆಯಲು ಸಾಧ್ಯವಾಗಲಿದೆ.
* ಇವು ಸೆಕ್ಟರ್ ಮಟ್ಟದಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಸಲಿವೆ.
*ಇದರಲ್ಲಿ ಪದಾತಿ ದಳ,ಟ್ಯಾಂಕ್ ಗಳು,ಆರ್ಮರ್ಡ್ ವೆಹಿಕಲಗಳು,ಧೀರ್ಘ ಶ್ರೇಣಿಯ ಫಿರಂಗಿಗಳ ದಳ,ಡ್ರೋನ್ ತರಬೇತಿ ಪಡೆದ ಯೋಧರು,ಲಾಜಿಸ್ಟಿಕಸ್ ಘಟಕಗಳು ಮತ್ತು ಕಮಾಂಡೋಗಳು ಇರಲಿದ್ದಾರೆ.
ಭೈರವ ಕಮಾಂಡೋ ಬೆಟಾಲಿಯನಗಳು :
* ಇವುಗಳನ್ನು ಹೆಚ್ಚಿಸಲಾಗಿದ್ದು,ಇದು ಆಧುನಿಕ ಯುದ್ಧ ತಂತ್ರಗಳಿಗೆ ಅನುಗುಣವಾಗಿ ಶಕ್ತಿಯುತ ಬೆಟಾಲಿಯನಗಳಾಗಿವೆ.
* ಇವುಗಳು ಕೌಂಟರ್ -ಮಾನವರಹಿತ ವಿಮಾನ ನಿಯಂತ್ರಣ ಸಾಮರ್ಥ್ಯಗಳನ್ನು ಒಳಗೊಂಡಿವೆ.
* ಭೈರವ ಕಮಾಂಡೋ ಗಳನ್ನೂ ಲೇಹ,ಶ್ರೀನಗರ,ನಗರೋಟಾ,ಪಶ್ಚಿಮ ಮತ್ತು ಈಶಾನ್ಯ ಭಾರತದಲ್ಲಿ ನಿಯೋಜಿಸಲಾಗುವುದು.ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗಳು ಸೇರಿದಂತೆ ಹಲವು ವಿಧದ ಯುದ್ಧ ಮತ್ತು ಸಂಘರ್ಷಗಳಲ್ಲಿ ಭೈರವ ಕಮಾಂಡೋಗಳನ್ನು ಬಳಸಲಾಗುವುದು.
* ಆರಂಭದಲ್ಲಿ 5 ಭೈರವ ಪಡೆಗಳನ್ನು ಸ್ಥಾಪಿಸಲಾಯಿತು.ಬಳಿಕ ಹಂತ ಹಂತವಾಗಿ 6 ತಿಂಗಳೊಳಗೆ 250 ಕಮಾಂಡೋಗಳ 23 ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಾಲಾಗಿದೆ.ಈ ಕಮಾಂಡೋಗಳು ಸ್ವತಂತ್ರ ತುಕುಡಿಗಳಾಗಿ ಕಾರ್ಯನಿರ್ವಹಿಸುತ್ತಾರೆ.
* ಈ ಹಿನ್ನೆಲೆಯಲ್ಲಿ ಭೈರವ ಕಮಾಂಡೋಗಳು ಘಾತಕ ಪಡೆಯ ಪರಂಪರೆ ಮುಂದುವರೆಸಿಕೊಂಡು ಹೊಗಲಿದ್ದಾರೆ.ಇವರು ವಿಶೇಷ ಪಡೆಗಳಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿ ಪಡೆದಿದ್ದಾರೆ.
* ಸೇನಾ ಪಡೆಗಳ ಆಧುನೀಕರಣದ ಭಾಗವಾಗಿ ಮತ್ತು ಯುದ್ಧ ಸಾಮರ್ಥ್ಯ ಹೆಚ್ಚಿಸಲು 79 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ,ಉಪಕರಣಗಳ ಖರೀದಿ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.
Take Quiz
Loading...