* ಅಮೆರಿಕದ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್, ಭಾರತದ ಭೂಸೇನೆಗೆ ಮೂರು AH-64E ಅಪಾಚೆ ಯುದ್ಧ ಹೆಲಿಕಾಪ್ಟರ್ಗಳನ್ನು ಹಸ್ತಾಂತರಿಸಿದೆ. ಇದು ಆರು ಹೆಲಿಕಾಪ್ಟರ್ ಪೂರೈಕೆ ಒಪ್ಪಂದದ ಮೊದಲ ಹಂತವಾಗಿದೆ.* AH-64E ಅಪಾಚೆ ವಿಶ್ವದ ಅತ್ಯಾಧುನಿಕ ಮಲ್ಟಿ-ರೋಲ್ ಯುದ್ಧ ಹೆಲಿಕಾಪ್ಟರ್ ಆಗಿದ್ದು, ಇದನ್ನು ಅಮೆರಿಕ ಸೇನೆ ಸಹ ಬಳಸುತ್ತದೆ.* ಈ ಹೆಲಿಕಾಪ್ಟರ್ಗಳ ಸಹಾಯದಿಂದ ಭಾರತೀಯ ಸೇನೆಯ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಲಿದೆ ಎಂದು ಸೇನೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.* ಈಗಾಗಲೇ 2020ರಲ್ಲಿ ಭಾರತ 22 ಅಪಾಚೆ ಹೆಲಿಕಾಪ್ಟರ್ಗಳನ್ನು ಪಡೆದಿತ್ತು. ಇದೇ ವೇಳೆ ಇನ್ನೂ ಆರು ಹೆಲಿಕಾಪ್ಟರ್ಗಳಿಗಾಗಿ ಒಪ್ಪಂದ ಮಾಡಿಕೊಂಡಿತ್ತು.* 2017ರಲ್ಲಿ ಭೂಸೇನೆಗಾಗಿ ₹4,168 ಕೋಟಿ ವೆಚ್ಚದಲ್ಲಿ ಆರು ಅಪಾಚೆ ಹೆಲಿಕಾಪ್ಟರ್ಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.