* ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಇರುವ ಮಜೂರು ಗ್ರಾಮ ಪಂಚಾಯತ್, ಭಾರತ–ಪಾಕಿಸ್ತಾನ ಗಡಿಯಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ಗಮನಿಸಿ ರಾಷ್ಟ್ರ ಮತ್ತು ಸೈನಿಕರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದೆ.* ಪಾಕಿಸ್ತಾನದ ವಿರುದ್ಧ ಯುದ್ದ ನಡೆಯುವ ಸಂದರ್ಭ ಎದುರಾದಲ್ಲಿ ಭಾರತೀಯ ಸೈನ್ಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ರೂ.10 ಲಕ್ಷ ಮೊತ್ತವನ್ನು ಬಜೆಟ್ನಲ್ಲಿ ಮೀಸಲಿಟ್ಟಿದೆ.* ಈ ಬಗ್ಗೆ ಗ್ರಾ.ಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಮತ್ತು ಉಪಾಧ್ಯಕ್ಷೆ ಮಂಜುಳಾ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.* ಮಜೂರು ಗ್ರಾಮ ಪಂಚಾಯತ್ ಇತ್ತೀಚಿನ ದಿನಗಳಿಂದ ಮಾತ್ರವಲ್ಲದೇ, ಮೊದಲಿನಿಂದಲೂ ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯತ್ತ ನಿಲುಕುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದೆ.* ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಗೆ ಭಾರತ ತಕ್ಕ ಪ್ರತಿಕಾರ ನೀಡುತ್ತಿರುವುದು ಹೆಮ್ಮೆಕಾರಕ ವಿಷಯವಾಗಿದ್ದು, ಈ ಸಂದರ್ಭದಲ್ಲಿಯೇ ಪಂಚಾಯತ್ ಈ ನಿರ್ಧಾರ ಕೈಗೊಂಡಿದೆ.* ಭಾರತ–ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ, ಸೈನ್ಯಕ್ಕೆ ಬೇಕಾದ ಸಹಾಯವನ್ನು ನೀಡುವುದು ಪ್ರತಿ ನಾಗರೀಕರ ಕರ್ತವ್ಯವಾಗಬೇಕೆಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.* ಮಜೂರು ಗ್ರಾ.ಪಂ ತೆಗೆದುಕೊಂಡಿರುವ ಈ ನಿರ್ಧಾರ ದೇಶದಲ್ಲಿಯೇ ಮೊದಲನೆಯದಾಗಿ ಐತಿಹಾಸಿಕ ಹಾಗೂ ಪ್ರೇರಣಾದಾಯಕ ಎಂದು ಅವರು ತಿಳಿಸಿದ್ದಾರೆ.