* ಹಣಕಾಸು ನೀತಿ-ನಿರ್ಧಾರಗಳಲ್ಲಿ ಸಹಾಯಕವಾಗಿರುವ ಮಾಹಿತಿಗಳನ್ನು ಸಂಗ್ರಹಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಮೂರು ಪ್ರಮುಖ ಸಮೀಕ್ಷೆಗಳನ್ನು ಆರಂಭಿಸಿದೆ, ಇದರೊಳಗೆ 'ಹಣದುಬ್ಬರದ ನಿರೀಕ್ಷೆಗಳು' ಎಂಬುದು ಕೂಡ ಸೇರಿದೆ.* ಆರ್ಬಿಐ ಸಾಮಾನ್ಯವಾಗಿ ಒಂದು ಹಣಕಾಸು ವರ್ಷದಲ್ಲಿ ಆರು ಬಾರಿ ದ್ವೈಮಾಸಿಕ ಹಣಕಾಸು ನೀತಿ ವಿಮರ್ಶೆಗಳನ್ನು ನಡೆಸುತ್ತದೆ. ಈ ಸಾಲಿನಲ್ಲಿ ಕೊನೆಯ ಸಭೆ ಏಪ್ರಿಲ್ ತಿಂಗಳಲ್ಲಿ ನಡೆದಿದ್ದು, ಮುಂದಿನ ಹಣಕಾಸು ನೀತಿ ಸಮಿತಿ ಸಭೆ ಜೂನ್ 4 ರಿಂದ 6ರವರೆಗೆ ನಡೆಯಲಿದೆ.* ಮೇ ಸುತ್ತಿನ 'ಕೌಟುಂಬಿಕ ಹಣದುಬ್ಬರ ನಿರೀಕ್ಷೆಗಳ ಸಮೀಕ್ಷೆ' (IESH) 19 ನಗರಗಳಲ್ಲಿ ಜರುಗಲಿದೆ. ಒಂದು ಕುಟುಂಬದ ಸದಸ್ಯರ ವೈಯಕ್ತಿಕ ಬಳಕೆಯ ಸರಕು ಹಾಗೂ ಸೇವೆಗಳ ಆಧಾರದ ಮೇಲೆ ಅವರು ಅನುಭವಿಸುವ ಬೆಲೆ ಏರಿಕೆಯು, ಹಣದುಬ್ಬರದ ಬಗ್ಗೆ ಅವರ ನಿಖರ ಅಭಿಪ್ರಾಯಗಳನ್ನು ಈ ಸಮೀಕ್ಷೆ ದಾಖಲಿಸುತ್ತದೆ.* 'ನಗರ ಗ್ರಾಹಕ ವಿಶ್ವಾಸ ಸಮೀಕ್ಷೆ' (UCCS) ಮುಖಾಂತರ ಕುಟುಂಬಗಳ ಭಾವನೆಗಳನ್ನು ಆಧರಿಸಿ ಆರ್ಥಿಕ ಪರಿಸ್ಥಿತಿ, ಉದ್ಯೋಗ, ಬೆಲೆ ಮಟ್ಟ, ಆದಾಯ ಹಾಗೂ ಖರ್ಚುಗಳ ಕುರಿತ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಸಮೀಕ್ಷೆಯೂ 19 ನಗರಗಳಲ್ಲಿ ನಡೆಯಲಿದೆ.* 'ಗ್ರಾಮೀಣ ಗ್ರಾಹಕ ವಿಶ್ವಾಸ ಸಮೀಕ್ಷೆ' (RCCS) ಮೂಲಕ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಂದ ಕಳೆದ ಒಂದು ವರ್ಷದ ಆರ್ಥಿಕ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಸಮೀಕ್ಷೆಗಳನ್ನು ನಿಯಮಿತವಾಗಿ ಆಯೋಜಿಸುತ್ತಿದೆ.