* ಭಾರತ ರೈಲು ಉಪಕರಣಗಳ ಜಾಗತಿಕ ರಫ್ತುದಾರನಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ರೈಲ್ವೆ ಇಲಾಖೆ ಘೋಷಿಸಿದೆ.* ಬೋಗಿ, ಕೋಚ್, ಲೋಕೊಮೋಟಿವ್ಸ್ ಹಾಗೂ ಪ್ರೊಪಲ್ಷನ್ ಸಿಸ್ಟಮ್ ಸೇರಿದಂತೆ ಅನೇಕ ಉತ್ಪನ್ನಗಳು ಈಗ ವಿಶ್ವಮಟ್ಟದಲ್ಲಿ ಬಳಕೆಯಾಗುತ್ತಿವೆ.* ಪ್ರಸ್ತುತ 16 ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಆಮದು ಮಾಡುತ್ತಿವೆ. ಇದರಲ್ಲಿ ಆಸ್ಟ್ರೇಲಿಯಾ, ಕೆನಡಾ, ರಷ್ಯಾ, ಫ್ರಾನ್ಸ್, ಜರ್ಮನಿ, ಇಟಲಿ, ಮೆಕ್ಸಿಕೊ, ಸೌದಿ ಅರೇಬಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿವೆ.* ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ ಅಭಿಯಾನಗಳಡಿ ಈ ರಫ್ತು ನಡೆಯುತ್ತಿದೆ.* ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿ ಮತ್ತು ಪೂರೈಕೆಯಲ್ಲಿ ಭಾರತದ ಸಾಮರ್ಥ್ಯವನ್ನು ಇದು ತೋರಿಸುತ್ತದೆ.* ಜೂನ್ನಲ್ಲಿ ಬಿಹಾರದ ಲೋಕೊಮೋಟಿವ್ ಘಟಕದಿಂದ ಜಿನೆವಾಗೆ ಮೊದಲ ಬಾರಿಗೆ ಲೋಕೊಮೋಟಿವ್ ರಫ್ತು ಮಾಡಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದಕ್ಕೆ ಚಾಲನೆ ನೀಡಿದರು.