* ಭಾರತೀಯ ಪೇಟೆಂಟ್ ಕಚೇರಿ ಈ ಆರ್ಥಿಕ ವರ್ಷದಲ್ಲಿ ನವೆಂಬರ್ 15ರವರೆಗೆ ಸರಾಸರಿ 41,010  ಪೇಟೆಂಟ್ ಗಳನ್ನು ನೀಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. * ಯಾವುದೇ ಒಂದು ವಸ್ತುವಿನ ಆವಿಷ್ಕಾರಕ್ಕೆ ಅದರ ಮಾಲೀಕರಿಗೆ ನೀಡಲಾಗುವ ವಿಶೇಷ ಅಧಿಕಾರವೇ ಪೇಟೆಂಟ್. ಇನ್ನೂ ಸರಳವಾಗಿ ಹೇಳಬೇಕೆಂದರೆ, ಒಂದು ವಸ್ತುವಿನ ಮೇಲೆ ಅದರ ನಿಜವಾದ ವಾರಸುದಾರರಿಗೆ ನೀಡಲಾಗುವ ಹಕ್ಕು. * ಆವಿಷ್ಕಾರ ಅರ್ಹವಾಗಿರುವ ನಿರ್ದಿಷ್ಟ ವಿಭಾಗಗಳಲ್ಲಿ ಒಂದಕ್ಕೆ ಸೇರಿರಬೇಕು, ಹೊಸ ಉಪಯುಕ್ತ ಆವಿಷ್ಕಾರವಾಗಿರಬೇಕು ಮತ್ತು ತೀರ ಸಹಜವಾದ ಪ್ರಕ್ರಿಯೆಯಾಗಿರಬಾರದು. * ಈ ಎಲ್ಲ ಪರೀಕ್ಷೆಗಳು ಮುಗಿದ ಬಳಿಕ ಆ ಆವಿಷ್ಕಾರಕ್ಕೆ ಪೇಟೆಂಟ್ ನೀಡಲಾಗುತ್ತದೆ. ಈ ಪೇಟೆಂಟ್ ಹೊಂದಿರುವ ವ್ಯಕ್ತಿ ಅನಂತರದ 20 ವರ್ಷಗಳ ತನಕ ಆ ಆವಿಷ್ಕಾರದ ಸಂಪೂರ್ಣ ಯಜಮಾನನಾಗಿರುತ್ತಾನೆ.