* ಭಾರತೀಯ ನೌಕಾಪಡೆಯು ಸುಮಾರು 50 ಸಾವಿರ ಕೋಟಿ ರೂ. ವೆಚ್ಚದಲ್ಲಿ 26 ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸುವ ಮಹತ್ವದ ಒಪ್ಪಂದಕ್ಕೆ ಮೇ 30 ರಂದು ಚಾಲನೆ ಸಿಗಲಿದೆ. * ಭಾರತ ಮತ್ತು ಫ್ರಾನ್ಸ್ ನಡುವಿನ ಮಾತುಕತೆಯು ಮೇ 30ರಂದು 50,000 ಕೋಟಿ ರೂ.ಗಳ ರಫೇಲ್ ಸೀ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ಪ್ರಾರಂಭವಾಗುವ ಸಾಧ್ಯತೆಯಿದೆ. * ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯೊಂದಿಗೆ 26 ರಫೇಲ್ ಮೆರೈನ್ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತವು ಫ್ರಾನ್ಸ್‌ನೊಂದಿಗೆ USD 6 ಶತಕೋಟಿ ಒಪ್ಪಂದವನ್ನು ಪ್ರಾರಂಭಿಸಿದೆ. * ಈ ಯುದ್ಧ ವಿಮಾನವು ಗಂಟೆಗೆ 1,389 ಕಿ.ಮೀ ವೇಗದಲ್ಲಿ ಹಾರುವ ಸಾಮರ್ಥ್ಯವಿದ್ದು, ಇದು 50,000 ಅಡಿ ಎತ್ತರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಆಧುನಿಕ ಯುದ್ಧ ವಿಮಾನವಾಗಿದೆ.