Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತೀಯ ಮೂಲದ ಖಗೋಳಶಾಸ್ತ್ರಜ್ಞರಿಗೆ ಯುಕೆ ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿ ಚಿನ್ನದ ಪದಕ
14 ಜನವರಿ 2026
➤ ಭಾರತೀಯ ಮೂಲದ ಖ್ಯಾತ ವಿಜ್ಞಾನಿ ಪ್ರೊ. ಶ್ರೀನಿವಾಸ ಕುಲಕರ್ಣಿ ಅವರು ಬ್ರಿಟನ್ನ ಪ್ರತಿಷ್ಠಿತ 'ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿ'ಯ (RAS) ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಖಗೋಳ ಭೌತಶಾಸ್ತ್ರ ಮತ್ತು
'ಟೈಮ್-ಡೊಮೇನ್ ಆಸ್ಟ್ರೋನಮಿ'
ಕ್ಷೇತ್ರದಲ್ಲಿ ಅವರು ಕೈಗೊಂಡಿರುವ 'ಕ್ಷಣಿಕ ಬಹುತರಂಗಾಂತರ' (Multi-wavelength transient) ಸಂಶೋಧನೆಗಳಿಗಾಗಿ ಈ ಅತ್ಯುನ್ನತ ಗೌರವ ನೀಡಲಾಗಿದೆ. 200 ವರ್ಷಗಳ ಇತಿಹಾಸವಿರುವ ಈ ಪ್ರಶಸ್ತಿಯನ್ನು ಈ ಹಿಂದೆ
ಅಲ್ಬರ್ಟ್ ಐನ್ಸ್ಟೀನ್,
ಎಡ್ವಿನ್ ಹಬಲ್
ಮತ್ತು
ಸ್ಟೀಫನ್ ಹಾಕಿಂಗ್
ಅವರಂತಹ ದಿಗ್ಗಜ ವಿಜ್ಞಾನಿಗಳು ಪಡೆದಿದ್ದು, ಇದೀಗ ಆ ಸಾಲಿಗೆ ಕನ್ನಡಿಗರೂ ಆದ ಕುಲಕರ್ಣಿ ಅವರು ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.
➤
ಶ್ರೀನಿವಾಸ ಕುಲಕರ್ಣಿ ಅವರ ಸಾಧನೆಗಳು:-
=>
ಮಹತ್ವದ ಅನ್ವೇಷಣೆಗಳು:
ಇವರು ಬ್ರೌನ್ ಡ್ವಾರ್ಫ್ಸ್ (Brown Dwarfs), ದೂರದ ಗಾಮಾ ಕಿರಣಗಳ ಸ್ಫೋಟ (Gamma-ray bursts) ಮತ್ತು ಮೊದಲ 'ಮಿಲಿಸೆಕೆಂಡ್ ಪಲ್ಸರ್' ಅನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
=>
ತಾಂತ್ರಿಕ ಕೊಡುಗೆ:
ಖಗೋಳ ವೀಕ್ಷಣೆಗೆ ಸಂಬಂಧಿಸಿದಂತೆ ಇವರು ಈವರೆಗೆ ಸುಮಾರು
10 ಅತ್ಯಾಧುನಿಕ ಉಪಕರಣಗಳನ್ನು (Gizmos)
ರೂಪಿಸಿದ್ದಾರೆ.
=>
ಅಂತರಾಷ್ಟ್ರೀಯ ಯೋಜನೆಗಳು:
ಪ್ರಸ್ತುತ ಇವರು ನಾಸಾದ (NASA) ನೇರಳಾತೀತ ಕಿರಣಗಳ ಅನ್ವೇಷಣೆಗೆ ಸಂಬಂಧಿಸಿದ
UVEX (Ultraviolet Explorer)
ಯೋಜನೆಯ ಭಾಗವಾಗಿದ್ದಾರೆ.
=>
ZTF ಮತ್ತು PTF:
ಇವರು ಪಾಲೋಮರ್ ಟ್ರಾನ್ಸಿಯೆಂಟ್ ಫ್ಯಾಕ್ಟರಿ (PTF) ಮತ್ತು ಜ್ವಿಕಿ ಟ್ರಾನ್ಸಿಯೆಂಟ್ ಫೆಸಿಲಿಟಿ (ZTF) ನಾಯಕತ್ವ ವಹಿಸಿ, ಆಕಾಶದಲ್ಲಿ ಸಂಭವಿಸುವ ಕ್ಷಣಿಕ ವಿದ್ಯಮಾನಗಳ (ನಕ್ಷತ್ರಗಳ ಸ್ಫೋಟ ಇತ್ಯಾದಿ) ಅಧ್ಯಯನದಲ್ಲಿ ಕ್ರಾಂತಿ ಮಾಡಿದ್ದಾರೆ.
➤
ಮೂಲತಃ ಕರ್ನಾಟಕದವರಾದ ಪ್ರೊ. ಶ್ರೀನಿವಾಸ ಕುಲಕರ್ಣಿ ಅವರು ಮಹಾರಾಷ್ಟ್ರದಲ್ಲಿ ಜನಿಸಿದರು. ಇವರು ಪ್ರಖ್ಯಾತ ಲೇಖಕಿ ಹಾಗೂ ರಾಜ್ಯಸಭಾ ಸದಸ್ಯೆ
ಸುಧಾ ಮೂರ್ತಿ
ಅವರ ಸಹೋದರರಾಗಿದ್ದಾರೆ. ಇವರ ಶೈಕ್ಷಣಿಕ ಪಯಣ ಅತ್ಯಂತ ಪ್ರಭಾವಶಾಲಿಯಾಗಿದ್ದು, 1978ರಲ್ಲಿ ದೆಹಲಿಯ
ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ (IIT Delhi)
ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ನಂತರ 1983ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ,
ಬರ್ಕ್ಲಿಯಲ್ಲಿ ಪಿಎಚ್.ಡಿ
ಪದವಿ ಪಡೆದರು. ಪ್ರಸ್ತುತ ಇವರು ಅಮೆರಿಕದ ಪ್ರತಿಷ್ಠಿತ
ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (Caltech)
ಖಗೋಳವಿಜ್ಞಾನದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ (2024) ಅವರು ಹಾಂಕಾಂಗ್ ನೀಡುವ ಪ್ರತಿಷ್ಠಿತ
'ಶಾ ಪ್ರಶಸ್ತಿ' (Shaw Prize)
ಗೆ ಆಯ್ಕೆಯಾಗಿದ್ದರು.
➤ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ನೆನಪಿಡಿ:-
-
RAS Gold Medal
ಅನ್ನು 1824 ರಿಂದ ನೀಡಲಾಗುತ್ತಿದೆ.
-
ಇದು ಖಗೋಳ ವಿಜ್ಞಾನ ಮತ್ತು ಭೂಭೌತಶಾಸ್ತ್ರ (Geophysics) ಎಂಬ ಎರಡು ವಿಭಾಗಗಳಲ್ಲಿ ನೀಡಲಾಗುತ್ತದೆ.
-
2024ರ ಭೂಭೌತಶಾಸ್ತ್ರ ವಿಭಾಗದ ಪದಕವನ್ನು ಆಂಡ್ರ್ಯೂ ಜಾಕ್ಸನ್ ಪಡೆದಿದ್ದಾರೆ.
Take Quiz
Loading...