Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತೀಯ ಚೆಸ್ಗೆ ಹೊಸ ಇತಿಹಾಸ: 3 ವರ್ಷದ ಬಾಲಕನ ದಾಖಲೆ ಸಾಧನೆ
9 ಡಿಸೆಂಬರ್ 2025
* ಡಿಸೆಂಬರ್ 2025ರಲ್ಲಿ ಭಾರತದ ಚೆಸ್ ಇತಿಹಾಸಕ್ಕೆ ಮತ್ತೊಂದು ಚಿನ್ನದ ಪುಟ ಸೇರ್ಪಡೆಯಾಗಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ 3 ವರ್ಷದ ಸರ್ವಜ್ಞ ಸಿಂಗ್ ಕುಶ್ವಾಹಾ ಅವರು ವಿಶ್ವದ ಅತಿಕಿರಿಯ ಅಧಿಕೃತ FIDE ರೇಟಿಂಗ್ ಪಡೆದ ಚೆಸ್ ಆಟಗಾರ ಎಂಬ ಅಪೂರ್ವ ಸಾಧನೆ ಮಾಡಿದ್ದಾರೆ. ಕೇವಲ 3 ವರ್ಷ 7 ತಿಂಗಳು 20 ದಿನ ವಯಸ್ಸಿನಲ್ಲೇ ಅವರು 1572 ರ್ಯಾಪಿಡ್ ರೇಟಿಂಗ್ ಗಳಿಸಿ ಅಂತಾರಾಷ್ಟ್ರೀಯ ಚೆಸ್ ಮಹಾಸಂಘ (FIDE) ದಾಖಲೆಗಳಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ. ಅಧಿಕೃತ ರೇಟಿಂಗ್ಗಾಗಿ ಅಗತ್ಯವಿರುವ 1400 ಅಂಕಗಳನ್ನು ಅವರು ಬಹಳ ಮೇಲಾಗಿಯೇ ದಾಟಿದ್ದಾರೆ.
*FIDE (International Chess Federation) ವಿಶ್ವದ ಚೆಸ್ ಕ್ರೀಡೆಗೆ ಸಂಬಂಧಿಸಿದ ಉನ್ನತ ಆಡಳಿತ ಸಂಸ್ಥೆ. ಅಧಿಕೃತ FIDE ರೇಟಿಂಗ್ ಪಡೆಯಲು ಆಟಗಾರರು, FIDE ಮಾನ್ಯತೆ ಪಡೆದ ಟೂರ್ನಿಗಳಲ್ಲಿ ಭಾಗವಹಿಸಬೇಕು. ಕನಿಷ್ಠ 5 ರೇಟಿಂಗ್ ಹೊಂದಿದ ಆಟಗಾರರ ವಿರುದ್ಧ ಆಡಬೇಕು, ಕನಿಷ್ಠ 1400 ಮಟ್ಟದ ಪ್ರದರ್ಶನ ನೀಡಬೇಕು ಈ ರೇಟಿಂಗ್ ಆಟಗಾರರ ಸಾಮರ್ಥ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಫಿಡೆ ಮಾಸ್ಟರ್, ಇಂಟರ್ನ್ಯಾಷನಲ್ ಮಾಸ್ಟರ್, ಗ್ರ್ಯಾಂಡ್ ಮಾಸ್ಟರ್ ಹಾದಿಗೆ ದಾರಿ ತೆರೆದುಕೊಡುತ್ತದೆ.
* ಸರ್ವಜ್ಞನ ಆರಂಭ ಮತ್ತು ವೇಗವಾದ ಬೆಳವಣಿಗೆ : 2022ರಲ್ಲಿ ಜನಿಸಿದ ಸರ್ವಜ್ಞನ ವಿಶೇಷ ಕಲಿಕೆ ಸಾಮರ್ಥ್ಯವನ್ನು ಅವರ ಪೋಷಕರು ಅವನು 2.5 ವರ್ಷದಾಗಿದ್ದಾಗಲೇ ಗಮನಿಸಿದರು. ಚೆಸ್ ಪರಿಚಯಿಸಿದ ಒಂದೇ ವಾರದಲ್ಲಿ ಎಲ್ಲಾ ಚೆಸ್ ಮೊರೆಗಳನ್ನು ಗುರುತಿಸುವುದು ಅವನ ಪ್ರತಿಭೆಯ ಸ್ಪಷ್ಟ ಸೂಚನೆ ಆಗಿತ್ತು. 2025ರ ವೇಳೆಗೆ ಅವನು ದಿನಕ್ಕೆ 4–5 ಗಂಟೆಗಳಷ್ಟು ಅಭ್ಯಾಸ ಮಾಡುತ್ತಿದ್ದ – ಒಂದು ಗಂಟೆ ತರಬೇತಿ, ಉಳಿದ ಸಮಯ ಆನ್ಲೈನ್ ಆಟ ಮತ್ತು ಪಜಲ್ ಪರಿಹಾರ. ಅವನ ಎತ್ತರದ ಕಾರಣ ಕೆಲವೊಮ್ಮೆ ಕುರ್ಚಿಯ ಮೇಲೆ ನಿಂತು ಆಡಬೇಕಾದರೂ, ದೀರ್ಘ ಪಂದ್ಯಗಳಲ್ಲೂ ಗಮನ ಕೇಂದ್ರೀಕರಿಸುವ ಅಪರೂಪದ ಸಾಮರ್ಥ್ಯ ಅವನಲ್ಲಿದೆ.
* ವಯಸ್ಕ ಆಟಗಾರರ ವಿರುದ್ಧ ಗೆಲುವು :
FIDE ರೇಟಿಂಗ್ ಪಡೆಯುವ ವೇಳೆ ಸರ್ವಜ್ಞ ಹಲವು ವಯಸ್ಕ ಆಟಗಾರರನ್ನು ಮಣಿಸಿದ್ದಾನೆ:
1. ಯೋಗೇಶ್ ನಮ್ದೇವ್ (20 ವರ್ಷ, ರೇಟಿಂಗ್ 1696)
2. ಅಭಿಜೀತ್ ಅವಾಸ್ಥಿ (22 ವರ್ಷ, ರೇಟಿಂಗ್ 1542)
3. ಶುಭಮ್ ಚೌರಾಸಿಯಾ (29 ವರ್ಷ, ರೇಟಿಂಗ್ 1559)
ಇದರಿಂದ 1572 ರ ರ್ಯಾಪಿಡ್ ರೇಟಿಂಗ್ ಪಡೆದು, ವಯಸ್ಸಿನ ಮಿತಿ ಮೀರಿ ತನ್ನ ಶಕ್ತಿಯನ್ನು ಸಾಬೀತುಪಡಿಸಿದ್ದಾನೆ.
* ಭಾರತೀಯ ಚೆಸ್ಗೆ ಮಹತ್ವ : ಆರ್. ಪ್ರಗ್ನಾನಂದಾ, ಡಿ. ಗುಕೇಶ್ ಅವರ ಬಳಿಕ ಇದೀಗ ಸರ್ವಜ್ಞ ಸಿಂಗ್ ಕುಶ್ವಾಹಾ ಭಾರತದ ಹೊಸ ತಲೆಮಾರಿನ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಉತ್ತಮ ಕೋಚಿಂಗ್ ವ್ಯವಸ್ಥೆ, ಆನ್ಲೈನ್ ವೇದಿಕೆಗಳು ಮತ್ತು ಚೆಸ್ ಮೇಲಿನ ಹೆಚ್ಚಿದ ಆಸಕ್ತಿ ಭಾರತವನ್ನು ಜಾಗತಿಕ ಚೆಸ್ ಶಕ್ತಿಯಾಗಿ ರೂಪಿಸುತ್ತಿವೆ.
* ಸರ್ವಜ್ಞನ ಸಾಧನೆ ಅಸಾಧಾರಣವಾದರೂ, ಅತಿ ಚಿಕ್ಕ ವಯಸ್ಸಿನಲ್ಲಿ ತೀವ್ರ ತರಬೇತಿ ಮತ್ತು ಸ್ಪರ್ಧೆಯ ನಡುವಿನ ಸಮತೋಲನ ಬಹಳ ಮುಖ್ಯ. ಬಾಲ್ಯದ ಸಹಜ ಅಭಿವೃದ್ಧಿ ಮತ್ತು ಕ್ರೀಡಾ ಸಾಧನೆಯ ನಡುವೆ ಸಮನ್ವಯ ಇಡುವುದೇ ಅವನ ದೀರ್ಘಕಾಲದ ಯಶಸ್ಸಿನ ಕೀಲಿ. ಆದರೂ, ಇಷ್ಟು ಕಡಿಮೆ ವಯಸ್ಸಿನಲ್ಲಿ FIDE ರೇಟಿಂಗ್ ಪಡೆದಿರುವುದು ಅವನಿಗೆ ದೀರ್ಘಾವಧಿಯ ಅವಕಾಶಗಳನ್ನು ಒದಗಿಸಿದೆ. ಸರಿಯಾದ ಮಾರ್ಗದರ್ಶನ ದೊರೆತರೆ, ಭವಿಷ್ಯದಲ್ಲಿ ಸರ್ವಜ್ಞ ಭಾರತಕ್ಕೆ ಮತ್ತೊಬ್ಬ ಅತಿಕಿರಿಯ ಗ್ರ್ಯಾಂಡ್ಮಾಸ್ಟರ್ ಆಗುವ ಸಾಧ್ಯತೆ ಇದೆ.
Take Quiz
Loading...