* ಸುಮಾರು ಐವತ್ತು ವರ್ಷಗಳ ಪರಂಪರೆ ಹೊಂದಿರುವ ಭಾರತೀಯ ಅಂಚೆ ಇಲಾಖೆಯ 'ರಿಜಿಸ್ಟರ್ಡ್ ಪೋಸ್ಟ್' ಸೇವೆಯನ್ನು ಸೆಪ್ಟೆಂಬರ್ 1ರಿಂದ ಸ್ಥಗಿತಗೊಳಿಸಲಾಗುತ್ತದೆ. * ಈ ಸೇವೆಯನ್ನು 'ಸ್ಪೀಡ್ ಪೋಸ್ಟ್' ಜತೆಗೆ ವಿಲೀನಗೊಳಿಸುವ ನಿರ್ಧಾರವನ್ನು ಇಲಾಖೆ ತೆಗೆದುಕೊಂಡಿದ್ದು, ಈ ಕುರಿತು ಸುತ್ತೋಲೆಯೊಂದನ್ನು ಬಿಡುಗಡೆ ಮಾಡಲಾಗಿದೆ.* ವಿಭಾಗಗಳು, ಕೋರ್ಟ್ಗಳು ಹಾಗೂ ಈ ಸೇವೆಯನ್ನು ಬಳಸುತ್ತಿರುವ ಇತರ ಸಂಸ್ಥೆಗಳು ಸೆ.1ರೊಳಗೆ ತಮ್ಮ ದಾಖಲೆಗಳಲ್ಲಿ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.* ಸ್ಪೀಡ್ ಪೋಸ್ಟ್ ಸೇವೆ ಜೊತೆಗೆ ವಿಲೀನಗೊಂಡು, ಟ್ರ್ಯಾಕಿಂಗ್ ಸುಧಾರಣೆ ಮತ್ತು ವೇಗವಾದ ವಿತರಣೆಯಿಂದ ಸೇವೆಯ ಗುಣಮಟ್ಟ ಹೆಚ್ಚಾಗಲಿದೆ.* ಆ್ಯಪ್ ಆಧರಿತ ಖಾಸಗಿ ಕೊರಿಯರ್ಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.* ಕೊರಿಯರ್ಗಳ ಆಗಮನದಿಂದ ರಿಜಿಸ್ಟರ್ಡ್ ಪೋಸ್ಟ್ ಬಳಕೆ ಕಡಿಮೆಯಾಗಿದ್ದು, ಅದನ್ನು ಸಮರ್ಪಕವಾಗಿ ಬದಲಿಸಲು ಸ್ಪೀಡ್ ಪೋಸ್ಟ್ ಪರಿಚಯಿಸಲಾಯಿತು. ಇದೀಗ ಅದೇ ಸೇವೆ ಮುಂದುವರಿಯಲಿದೆ.* ಅಂಚೆ ಕಚೇರಿಗಳಲ್ಲಿ ಇನ್ನು ಮುಂದೆ ಸಾಮಾನ್ಯ ಅಂಚೆ ಹಾಗೂ ಸ್ಪೀಡ್ ಪೋಸ್ಟ್ ಸೇವೆಗಳೊಂದಿಗೆ ಸ್ಮಾಲ್ ಸೇವಿಂಗ್ಸ್ ಯೋಜನೆಗಳು ಮಾತ್ರ ಮುಂದುವರಿಯಲಿವೆ.