* ಮೈಸೂರು ಮಹಾರಾಣಿ ಕ್ಲಸ್ಟರ್ ವಿವಿಯ 2ನೇ ಮತ್ತು 3ನೇ ಘಟಿಕೋತ್ಸವ ಅ.3 ರಂದು ಜರುಗಲಿದೆ. ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್, ಬಿ.ಟಿ. ರುದ್ರೇಶ್, ಡಾ. ಎಚ್.ಎನ್. ಉಷಾ, ಬಯೋಕಾನ್ ಸಂಸ್ಥಾಪಕಿ ಡಾ. ಕಿರಣ್ ಮಜುಂದಾರ್ ಷಾ, ಮಾನವ ಹಕ್ಕು ಹೋರಾಟಗಾರ್ತಿ ದು. ಸರಸ್ವತಿ ಮತ್ತು ಕ್ರಿಕೆಟಿಗ ವೇದಾ ಕೃಷ್ಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.* 2023-24ಹಾಗೂ 2024-25 ಸಾಲಿನಲ್ಲಿ ಒಟ್ಟು 3573 ವಿದ್ಯಾರ್ಥಿಗಳಿಗೆ ಪದವಿ ಪ್ರದಾನವಾಗಲಿದೆ. 107 ಮಂದಿ ರ್ಯಾಂಕ್ ಪಡೆದಿದ್ದು, 52 ಮಂದಿ ಬಂಗಾರದ ಪದಕ ಪಡೆದಿದ್ದಾರೆ.* ವಿಷ್ಣುವರ್ಧನ್ 75ನೇ ಜನ್ಮದಿನದ ಅಂಗವಾಗಿ ಸ್ಮಾರಕಕ್ಕೆ ಭೇಟಿ ನೀಡಿದ ಭಾರತಿ ವಿಷ್ಣುವರ್ಧನ್, “ನಮ್ಮ ಕುಟುಂಬದ ಬಗ್ಗೆ ಯಾರೇನಾದ್ರೂ ತಪ್ಪಾಗಿ ಮಾತನಾಡಿದ್ರೆ ನಂಬಬೇಡಿ. ಮನಸ್ಸಿಗೆ ನೋವು ಆಗುತ್ತದೆ. ಸಮಸ್ಯೆ ಇದ್ದರೆ ನಮ್ಮ ಮನೆಗೆ ಬಂದು ಮಾತಾಡಿ ಪರಿಹರಿಸಿಕೊಳ್ಳಿ” ಎಂದು ಹೇಳಿದರು.\\* “ವಿಷ್ಣುವರ್ಧನ್ ನಮ್ಮೆಲ್ಲರ ಜೊತೆಗೆ ಇದ್ದಾರೆ. ಒಳ್ಳೆಯ ಕೆಲಸ ಮಾಡಿ, ಯಾರ ಮೇಲೂ ದ್ವೇಷವಿಡಬೇಡಿ. ನಿಮ್ಮ ಸಂತೋಷವೇ ನಮ್ಮ ಸಂತೋಷ” ಎಂದು ಅಭಿಮಾನಿಗಳಿಗೆ ಕರೆ ನೀಡಿದರು. ಜೊತೆಗೆ ಮೊಮ್ಮಗ ಜೇಷ್ಟವರ್ಧನ್ಗೆ ಪ್ರೀತಿ, ಬೆಂಬಲ ನೀಡಬೇಕೆಂದು ಮನವಿ ಮಾಡಿದರು.