* ಸೈಬರ್ ಭದ್ರತೆ, ಉದಯೋನ್ಮುಖ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಂತಹ ತಾಂತ್ರಿಕ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಕಾಯ್ದುಕೊಳ್ಳಲು ಅಮೆರಿಕಾ ಉತ್ಸುಕವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಮಂಗಳವಾರ(ಮಾರ್ಚ್ 18) ಹೇಳಿದ್ದಾರೆ.* ಅಮೆರಿಕದ ತುಳಸಿ ಗಬ್ಬಾರ್ಡ್ ಭಾರತ ಪ್ರವಾಸದ ಸಂದರ್ಭದಲ್ಲಿ ವಿದೇಶಾಂಗ ಸಚಿವಾಲಯ ಆಯೋಜಿಸಿದ ಸಂವಾದದಲ್ಲಿ ಭಾಗವಹಿಸಿ, ಭಾರತ-ಅಮೆರಿಕಾ ಸಂಬಂಧ ಬಲಪಡಿಸುವುದು ಪ್ರಮುಖ ಉದ್ದೇಶವೆಂದು ಹೇಳಿದ್ದಾರೆ. ಭದ್ರತಾ ಪಾಲುದಾರಿಕೆ, ಪರಸ್ಪರ ಹಿತಾಸಕ್ತಿ ಮತ್ತು ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದ್ದಾರೆ.* ಟ್ರಂಪ್ ಮತ್ತು ಮೋದಿ ತಮ್ಮ ಜನರ ಸುರಕ್ಷತೆ, ಭದ್ರತೆ, ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುತ್ತಾರೆ. ಯಾವುದೇ ನಾಯಕನ ತಮ್ಮ ಜನರಿಗೆ ಸೇವೆ ಸಲ್ಲಿಸಲು, ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧನಾಗಿರುತ್ತಾನೆಯೋ ಅವನು ಉತ್ತಮ ನಾಯಕ ಎನಿಸುತ್ತಾನೆ ಎಂದು ಗಬ್ಬಾರ್ಡ್ ಹೇಳಿದ್ದಾರೆ.* ಈಗಿನ ಯುದ್ಧಭರಿತ ಪರಿಸ್ಥಿತಿಯಲ್ಲಿ, ಸ್ನೇಹಿತರು ಮತ್ತು ಪ್ರತಿಸ್ಪರ್ಧಿಗಳೊಂದಿಗೆ ನೇರವಾಗಿ ಸಮಾಲೋಚನೆ ನಡೆಸುವ ನಾಯಕತ್ವ ಅಗತ್ಯವಿದೆ ಎಂದು ಗಬ್ಬಾರ್ಡ್ ಅಭಿಪ್ರಾಯಪಟ್ಟರು.