* ಪ್ರಸ್ತುತ ವರ್ಷದ ತನಕ ಭಾರತದಲ್ಲಿ ಒಟ್ಟು 704 ಮೆಡಿಕಲ್ ಕಾಲೇಜುಗಳಿದ್ದು, ಈ ಪೈಕಿ 74 ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಕರ್ನಾಟಕವು 70 ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು ದ್ವಿತೀಯ ಸ್ಥಾನದಲ್ಲಿದೆ. * ಸಚಿವಾಲಯದ ರಾಜ್ಯ ಖಾತೆ ಸಚಿವೆ ಡಾ.ಭಾರತಿ ಪ್ರವೀಣ್ ಈ ಕುರಿತು ಮಾಹಿತಿ ನೀಡಿದ ಪ್ರಕಾರ ಭಾರತದಲ್ಲಿ ಮೂರು ಹಂತಗಳಲ್ಲಿ 157 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 58 ಕಾಲೇಜುಗಳನ್ನು ಮೊದಲ ಹಂತದಲ್ಲಿ, 24 ಕಾಲೇಜುಗಳನ್ನು ಎರಡನೇ ಹಂತದಲ್ಲಿ ಹಾಗೂ 75 ಕಾಲೇಜುಗಳನ್ನು 3ನೇ ಹಂತದಲ್ಲಿ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.