* ಭಾರತೀಯ ರೈಲ್ವೆಯು ವಿದ್ಯುತ್ ಚಾಲಿತ ರೈಲು ವ್ಯವಸ್ಥೆ ಆರಂಭಿಸಿ 100 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಫೆಬ್ರುವರಿ. 3ರಂದು ಶತಮಾನೋತ್ಸವವನ್ನು ಆಚರಿಸಲಾಯಿತು.* ಮೊದಲ ವಿದ್ಯುತ್ ಚಾಲಿತ ರೈಲಾದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (ಈ ಹಿಂದೆ ವಿಕ್ಟೋರಿಯಾ ಟರ್ಮಿನಲ್) ಪ್ಲಾಟ್ ಫಾರ್ಮ್ 2ರಿಂದ ಫೆಬ್ರವರಿ 3,1925ರಂದು ಮುಂಬೈನ ಕುರ್ಲಾಗೆ ಸಂಚಾರ ಆರಂಭಿಸಿತು.* ಮೊದಲ ಭಾರತೀಯ ರೈಲು ಪ್ರಾರಂಭವಾದ 72 ವರ್ಷಗಳ ನಂತರ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಿತು. ಮೊದಲ ವಿದ್ಯುತ್ ಚಾಲಿತ ರೈಲು ಎಲೆಕ್ಟಿಕ್ ಮಲ್ಟಿಪಲ್ ಯುನಿಟ್ಗಳ ಮೂಲ ಆವೃತ್ತಿಯಾಗಿದ್ದು, ಪರಿಸರ ಸುರಕ್ಷತೆಗಾಗಿ ಹಾಗೂ ದೀರ್ಘಕಾಲದ ಪರಿವರ್ತನೆಗಾಗಿ ಇದನ್ನು ರೂಪಿಸಲಾಗಿದ್ದು ಇದು 100 ವರ್ಷಗಳನ್ನು ಪೂರೈಸಿದೆ.* ವಿದ್ಯುತ್ ಚಾಲಿತ ರೈಲುಗಳು ಪರಿಸರ ಸ್ನೇಹಿಯಾಗಿದ್ದು, ಡೀಸೆಲ್ ಎಂಜಿನ್ಗೆ ಹೋಲಿಸಿದರೆ ವಿದ್ಯುತ್ ರೈಲುಗಳು ಉತ್ತಮ ದಕ್ಷತೆ, ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿವೆ. ವಿದ್ಯುತ್ ಲೋಕೋಮೋಟಿವ್ ಗಳು ಸಾಮಾನ್ಯವಾಗಿ ಡೀಸೆಲ್ ಗಿಂತಲೂ ಹೆಚ್ಚು ಶಕ್ತಿಯುತ ಮತ್ತು ಹೆಚ್ಚು ಸ್ಪಂದಿಸುವ ಮತ್ತು ವಿಶ್ವಾಸಾರ್ಹ ಗುಣಗಳನ್ನು ಹೊಂದಿವೆ.* ಭೂಮಿಯಲ್ಲಿ ತೈಲ ಅಥವಾ ಕಲ್ಲಿದ್ದಲು ನಿಕ್ಷೇಪಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲದ ಕಾರಣ ಪರ್ಯಾಯ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾಯಿತು. ವಿಶ್ವದ ಯುದ್ಧದ ಸಮಯದಲ್ಲಿ ವಸ್ತುಗಳ ಪೂರೈಕೆ ಸಮಸ್ಯೆಯನ್ನು ನೀಗಿಸಲು ರೇಲ್ವೆ ವ್ಯವಸ್ಥೆಯನ್ನು ವಿದ್ಯುನ್ಮಾನಗೊಳಿಸಲಾಯಿತು.