* ಅಮೆರಿಕದ ಇಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ, ಮುಂದಿನ ವಾರ ಭಾರತದ ಮುಂಬೈನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆಯಲು ಸಜ್ಜಾಗಿದೆ. ಜುಲೈ 15ರಂದು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಈ ಮಳಿಗೆ ಉದ್ಘಾಟನೆ ಆಗಲಿದೆ.* ಈ ಮೂಲಕ ಟೆಸ್ಲಾ ಭಾರತದಲ್ಲಿ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ. ಕಂಪನಿಯ ಪ್ರಕಾರ, ಇದು ಭಾರತದಲ್ಲಿ ಆರಂಭವಾಗುವ ಮೊದಲ ಮಳಿಗೆ.* ಟೆಸ್ಲಾ ₹8.58 ಕೋಟಿ ಮೌಲ್ಯದ ಕಾರು ಮತ್ತು ಪರಿಕರಗಳನ್ನು ಈಗಾಗಲೇ ಆಮದು ಮಾಡಿಸಿದೆ. ಭಾರತದಲ್ಲಿ ಕಾರು ಆಮದಿಗೆ ಶೇ.70ರಷ್ಟು ಸುಂಕ ಪಾವತಿಸಬೇಕಾಗುತ್ತದೆ. ಇದರೊಂದಿಗೆ, ಟೆಸ್ಲಾ ಜಗತ್ತಿನ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿರುವ ಭಾರತವನ್ನು ಟಾರ್ಗೆಟ್ ಮಾಡುತ್ತಿದೆ.* ಈ ಹಿಂದೆ, ಟೆಸ್ಲಾ ಮುಂಬೈನ ಲೋಧಾ ಲಾಜಿಸ್ಟಿಕ್ಸ್ ಪಾರ್ಕ್ನಲ್ಲಿ 24,565 ಚದರ ಅಡಿ ಸ್ಥಳವನ್ನು ಐದು ವರ್ಷಗಳ ಗುತ್ತಿಗೆ ಮೇಲೆ ಪಡೆದುಕೊಂಡಿತ್ತು.