* ವಿಶ್ವ ಬ್ಯಾಂಕ್ನ ವರದಿಯ ಪ್ರಕಾರ, 2011–12ರಿಂದ 2022–23ರ ಅವಧಿಯಲ್ಲಿ ಭಾರತವು ಸುಮಾರು 17.1 ಕೋಟಿ ಜನರನ್ನು ಕಡು ಬಡತನದಿಂದ ಹೊರತೆಗೆಯಲು ಯಶಸ್ವಿಯಾಗಿದೆ.* ದಿನಕ್ಕೆ 2.15 ಡಾಲರ್ (ಸುಮಾರು ₹183) ಕಿಂತ ಕಡಿಮೆ ಆದಾಯ ಹೊಂದಿರುವವರನ್ನು ಕಡು ಬಡವರು ಎಂದು ಪರಿಗಣಿಸಲಾಗುತ್ತದೆ.* ಈ ದಶಕದೊಳಗೆ ಭಾರತದಲ್ಲಿ ಕಡು ಬಡತನದ ಮಟ್ಟದಲ್ಲಿ ಸ್ಪಷ್ಟ ಇಳಿಕೆ ಕಂಡುಬಂದಿದ್ದು, 2011–12ರಲ್ಲಿ ಶೇಕಡಾ 16.2ರಷ್ಟಿದ್ದ ಬಡತನ ಪ್ರಮಾಣವು 2022–23ರ ವೇಳೆಗೆ ಶೇಕಡಾ 2.3ಕ್ಕೆ ತಗ್ಗಿದೆಯೆಂದು ವರದಿ ತಿಳಿಸುತ್ತದೆ.* ಈ ಅವಧಿಯಲ್ಲಿ ಗ್ರಾಮೀಣ ಬಡತನ ಶೇಕಡಾ 18.4ರಿಂದ 2.8ಕ್ಕೆ ಇಳಿದಿದ್ದು, ನಗರ ಬಡತನ ಶೇಕಡಾ 10.7ರಿಂದ 1.1ಕ್ಕೆ ತಗ್ಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಿನ ಬಡತನದ ವ್ಯತ್ಯಾಸವು ಶೇಕಡಾ 7.7ರಿಂದ 1.7ಕ್ಕೆ ಇಳಿದಿರುವುದು ಗಮನಾರ್ಹವಾಗಿದೆ.* ಇದರಿಂದ ಹೊರತುಪಡಿಸಿ, ಭಾರತವು ಇದೀಗ ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ (LMIC) ವರ್ಗಕ್ಕೆ ಸೇರಿದೆ. ದಿನಕ್ಕೆ 3.65 ಡಾಲರ್ (ಅಂದಾಜು ₹311) ಕ್ಕಿಂತ ಕಡಿಮೆ ಆದಾಯ ಹೊಂದಿರುವ ಬಡವರ ಸಂಖ್ಯೆಯೂ ಗಣನೀಯವಾಗಿ ಇಳಿದಿದೆ. ಈ ಪ್ರಮಾಣದ ಅಡಿಯಲ್ಲಿ 37.8 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂಬುದನ್ನು ವರದಿ ಸ್ಪಷ್ಟಪಡಿಸಿದೆ.* ಈ ಹತ್ತು ವರ್ಷಗಳ ಅವಧಿಯಲ್ಲಿ ಗ್ರಾಮೀಣ ಬಡತನ ಶೇಕಡಾ 69ರಿಂದ 3.25ಕ್ಕೆ ಇಳಿದರೆ, ನಗರ ಬಡತನ ಶೇಕಡಾ 43.5ರಿಂದ 17.2ಕ್ಕೆ ತಗ್ಗಿದೆಯೆಂದು ವಿವರಿಸಲಾಗಿದೆ.* 2011–12ರಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಅತ್ಯಧಿಕ ಕಡು ಬಡವರು ಇದ್ದರು. * ಈ ಐದು ರಾಜ್ಯಗಳು ಒಟ್ಟಾರೆ ದೇಶದ ಶೇಕಡಾ 65 ಕಡು ಬಡವರನ್ನು ಒಳಗೊಂಡಿದ್ದವು. 2022–23ರ ವೇಳೆಗೆ ಈ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.* ಆದರೆ, ಈ ಅವಧಿಯಲ್ಲಿ ಯುವಜನರ ನಿರುದ್ಯೋಗ ಶೇಕಡಾ 13.3ರಿಂದ 29ಕ್ಕೆ ಏರಿಕೆಯಾಗಿದೆ ಎಂದು ವರದಿ ಉಲ್ಲೇಖಿಸುತ್ತದೆ.