* ಭಾರತದಲ್ಲಿ ಶಿಶು ಮರಣ ಪ್ರಮಾಣವು ಹಲವು ದಶಕಗಳಿಂದ ಗಂಭೀರ ಕಳವಳಕಾರಿಯಾಗಿದ್ದರೂ, ಆಧುನಿಕ ವೈದ್ಯಕೀಯ, ತಾಯಿಯ ಆರೋಗ್ಯ ಸೇವೆಗಳ ಸುಧಾರಣೆ, ಲಸಿಕೆ ಅಭಿಯಾನಗಳು ಮತ್ತು ಉತ್ತಮ ಹೆರಿಗೆ ಸೌಲಭ್ಯಗಳಿಂದಾಗಿ ಗಮನಾರ್ಹ ಇಳಿಕೆ ಕಂಡಿದೆ.* SRS 2023 ವರದಿ ಪ್ರಕಾರ, ಶಿಶು ಮರಣ ದರ (IMR) 2013ರಲ್ಲಿ 40 ರಿಂದ 2023ರಲ್ಲಿ 25ಕ್ಕೆ ಇಳಿದಿದೆ. ಇದು ಶೇಕಡಾ 37.5 ಇಳಿಕೆ. 1971 ರಲ್ಲಿ 129 ಆಗಿದ್ದ IMR ಈಗ ಶೇಕಡಾ 80 ರಷ್ಟು ಕಡಿಮೆಯಾಗಿದೆ.* ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಉತ್ತರ ಪ್ರದೇಶಗಳಲ್ಲಿ IMR 37 ಆಗಿದ್ದು, ಮಣಿಪುರದಲ್ಲಿ ಅತಿ ಕಡಿಮೆ (3) ಕಂಡುಬಂದಿದೆ. ಕೇರಳವು ದೊಡ್ಡ ರಾಜ್ಯಗಳಲ್ಲಿ ಅತಿ ಕಡಿಮೆ ಶಿಶು ಮರಣ ದರ (5) ದಾಖಲಿಸಿದೆ.* ಗ್ರಾಮೀಣ ಪ್ರದೇಶಗಳಲ್ಲಿ IMR 44 ರಿಂದ 28 ಕ್ಕೆ, ನಗರ ಪ್ರದೇಶಗಳಲ್ಲಿ 27 ರಿಂದ 18 ಕ್ಕೆ ಇಳಿಕೆಯಾಗಿದೆ. ಇದು ಕ್ರಮವಾಗಿ ಶೇ. 36 ಮತ್ತು ಶೇ. 33 ಇಳಿಕೆಯನ್ನು ತೋರಿಸುತ್ತದೆ.* ಜನನ ದರವೂ ಕುಸಿತ ಕಂಡಿದ್ದು, 1971 ರಲ್ಲಿ 36.9 ಇಂದ 2023 ರಲ್ಲಿ 18.4 ಕ್ಕೆ ಇಳಿದಿದೆ. ಕಳೆದ ದಶಕದಲ್ಲಿ ಜನನ ದರ ಶೇ. 14 ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನನ ಪ್ರಮಾಣ ಹೆಚ್ಚು ಇದ್ದರೂ ಇಳಿಕೆ ಸ್ಪಷ್ಟವಾಗಿದೆ.* 2023 ರಲ್ಲಿ ಬಿಹಾರವು ಅತಿ ಹೆಚ್ಚು ಜನನ ಪ್ರಮಾಣ (25.8) ಹೊಂದಿದ್ದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅತಿ ಕಡಿಮೆ (10.1) ಹೊಂದಿವೆ.