Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತದಲ್ಲಿ ಫುಟ್ಬಾಲ್ ಸಂಭ್ರಮ: ಮೆಸ್ಸಿಯ ‘ಗೋಟ್’ ಪ್ರವಾಸ ಯಶಸ್ವಿ
Authored by:
Akshata Halli
Date:
16 ಡಿಸೆಂಬರ್ 2025
*
ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ
ಅವರ ಬಹುನಿರೀಕ್ಷಿತ ಭಾರತದ ‘
ಗೋಟ್’ (Greatest of All Time)
ಪ್ರವಾಸವು ದೆಹಲಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಯಿತು. ಕೋಲ್ಕತ್ತದ ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ಗೊಂದಲ ಮತ್ತು ಅಸಮಾಧಾನದಿಂದ ಆರಂಭಗೊಂಡ ಈ ಪ್ರವಾಸ, ರಾಷ್ಟ್ರ ರಾಜಧಾನಿ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳ ಉತ್ಸಾಹಭರಿತ ಸ್ವಾಗತದೊಂದಿಗೆ ಸುಖಾಂತ್ಯ ಕಂಡಿತು.
*
ಕೋಟ್ಲಾದ ಜೇಟ್ಲಿ ಕ್ರೀಡಾಂಗಣದಲ್ಲಿ
ಮೆಸ್ಸಿ ಕಾಣಿಸಿಕೊಂಡ ತಕ್ಷಣವೇ ಅಭಿಮಾನಿಗಳು ಭಾರೀ ಹರ್ಷೋದ್ಗಾರ ವ್ಯಕ್ತಪಡಿಸಿದರು. ಅರ್ಜೆಂಟೀನಾದ ನೀಲಿ–ಬಿಳಿ ಜೆರ್ಸಿ ಧರಿಸಿದ್ದ ಪ್ರೇಕ್ಷಕರು ನಿರಂತರವಾಗಿ ಮೆಸ್ಸಿ ಅವರ ಹೆಸರನ್ನು ಜಪಿಸಿದರು. ಮೆಸ್ಸಿ ಅವರು ಪ್ರೇಕ್ಷಕರತ್ತ ಕೈಬೀಸುತ್ತಾ ಗೌರವ ಸೂಚಿಸಿದ್ದು, ಕೆಲ ಸಮಯ ಸಹ ಆಟಗಾರರಾದ ಲೂಯಿಸ್ ಸೊರೇಝ್ ಮತ್ತು ರಾಡ್ರಿಗೊ ಡಿ ಪಾಲ್ ಅವರೊಂದಿಗೆ ಚೆಂಡನ್ನು ಸ್ಟ್ಯಾಂಡ್ನತ್ತ ಒದ್ದರು. ಇದರಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ರೋಮಾಂಚನಗೊಂಡರು.
* ಕಾರ್ಯಕ್ರಮದ ವೇಳೆ ಮೆಸ್ಸಿ ಅವರು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಿ, ಭಾರತೀಯ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವನ್ನು ಪ್ರಶಂಸಿಸಿದರು. “ಇದು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಸುಂದರ ಅನುಭವ. ಖಂಡಿತವಾಗಿ ಮತ್ತೊಮ್ಮೆ ಭಾರತಕ್ಕೆ ಬರುವೆ” ಎಂದು ಅವರು ಹೇಳಿದರು. ಕಾರ್ಯಕ್ರಮದ ನಂತರ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಐಸಿಸಿ ಅಧ್ಯಕ್ಷ ಜಯ್ ಶಾ, ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಹಾಗೂ ಭಾರತೀಯ ಫುಟ್ಬಾಲ್ ದಿಗ್ಗಜ ಬೈಚುಂಗ್ ಭುಟಿಯಾ ಸೇರಿದಂತೆ ಹಲವು ಗಣ್ಯರೊಂದಿಗೆ ಮೆಸ್ಸಿ ಅವರು ಭೇಟಿಯಾದರು.
* ಪ್ರತಿಕೂಲ ಹವಾಮಾನದ ಕಾರಣ ಮೆಸ್ಸಿ ಅವರ ದೆಹಲಿಗೆ ಆಗಮನ ವಿಳಂಬವಾದರೂ, ಅವರ ಭೇಟಿ ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಸ್ಮರಣೀಯ ಕ್ಷಣವಾಗಿ ಉಳಿಯಿತು. ಇದೇ ವೇಳೆ ಭಾರತೀಯ ಫುಟ್ಬಾಲ್ ದಿಗ್ಗಜ ಸುನಿಲ್ ಚೆಟ್ರಿ ಅವರು ಮೆಸ್ಸಿಯೊಂದಿಗೆ ಒಡನಾಡಿದ ಅನುಭವವನ್ನು “ಕನಸು ನನಸಾದ ಕ್ಷಣ” ಎಂದು ವರ್ಣಿಸಿದ್ದಾರೆ.
* ಮೆಸ್ಸಿ ಅವರ ‘ಗೋಟ್’ ಪ್ರವಾಸವು ಭಾರತದಲ್ಲಿ ಫುಟ್ಬಾಲ್ ಜನಪ್ರಿಯತೆಯನ್ನು ಮತ್ತಷ್ಟು ಬಲಪಡಿಸಿದ ಮಹತ್ವದ ಪ್ರಸ್ತುತ ವಿದ್ಯಮಾನವಾಗಿ ಗುರುತಿಸಿಕೊಂಡಿದೆ.
Take Quiz
Loading...