* ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾಲದಲ್ಲಿ ಭಾರತದ ಕಡು ಬಡತನದ ಪ್ರಮಾಣದಲ್ಲಿ ಮಹತ್ವದ ಇಳಿಕೆಯಾಗಿರುವುದು ಗಮನಾರ್ಹ.* ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2011-2012ರಲ್ಲಿ ಶೇ.27.1 ಇದ್ದ ಬಡತನದ ಪ್ರಮಾಣ 2022-2023ರ ವೇಳೆಗೆ ಶೇ.5.3ಕ್ಕೆ ಇಳಿದಿದೆ.* 2022-2023ರಲ್ಲಿ ಭಾರತದ 75.24 ಮಿಲಿಯನ್ ಜನರು ತೀವ್ರ ಬಡತನದಲ್ಲಿದ್ದರೆ, ಇದು 2011-2012ರಲ್ಲಿ 344.47 ಮಿಲಿಯನ್ ಇತ್ತು. ಅಂದರೆ, 11 ವರ್ಷಗಳಲ್ಲಿ 269 ಮಿಲಿಯನ್ ಜನರು ಕಡು ಬಡತನದಿಂದ ಹೊರಬಂದಿದ್ದಾರೆ.* ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮಬಂಗಾಳ ಮತ್ತು ಮಧ್ಯಪ್ರದೇಶ ರಾಜ್ಯಗಳು ಕಡು ಬಡತನ ಇಳಿಕೆಗೆ ಮೂರನೇ ಎರಡರಷ್ಟು ಭಾಗ ಕೊಡುಗೆ ನೀಡಿವೆ.* ಇದಕ್ಕೂ ಮುಂಚೆ, 2005-2006ರಲ್ಲಿ ಶೇ.53.8ರಷ್ಟಿದ್ದ ಬಡತನ ಸೂಚ್ಯಂಕ, 2019-2021ರ ವೇಳೆಗೆ ಶೇ.16.4ಕ್ಕೆ ಮತ್ತು 2022-2023ರ ವೇಳೆಗೆ ಶೇ.15.5ಕ್ಕೆ ಇಳಿದಿದೆ.