* ಜಪಾನ್ ಪ್ರಧಾನಿ ಶಿಗೆರು ಇಶಿಬಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ನಡೆದ ಭಾರತ-ಜಪಾನ್ ವಾರ್ಷಿಕ ಶೃಂಗ ಯಶಸ್ವಿಯಾಗಿದೆ.* ಈ ಶೃಂಗದಲ್ಲಿ ಜಪಾನ್ ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ ₹6 ಲಕ್ಷ ಕೋಟಿ (10 ಟ್ರಿಲಿಯನ್ ಯೆನ್) ಹೂಡಿಕೆ ಮಾಡುವ ಗುರಿ ಘೋಷಿಸಿದೆ. ಹೂಡಿಕೆ ಅಮೂಲ್ಯ ಖನಿಜಗಳು, ರಕ್ಷಣಾ ಕ್ಷೇತ್ರ ಹಾಗೂ ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಕೇಂದ್ರೀಕೃತವಾಗಿರಲಿದೆ.* ಮೋದಿ ಅವರು ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವಲ್ಲಿ ಭಾರತ-ಜಪಾನ್ ಸಹಕಾರ ನಿರ್ಣಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.* ಉಭಯ ದೇಶಗಳು ಮುಕ್ತ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಸ್ಥಾಪನೆಗೆ ಬದ್ಧವಾಗಿರುವುದಾಗಿ ತಿಳಿಸಿದರು.* ಚಂದ್ರಯಾನ-5 ಯೋಜನೆಯನ್ನು ಜಂಟಿಯಾಗಿ ಕೈಗೊಳ್ಳಲು ಭಾರತ ಮತ್ತು ಜಪಾನ್ ಒಪ್ಪಂದ ಮಾಡಿಕೊಂಡಿವೆ. ಸೈಬರ್ ಭದ್ರತೆ, ಭಯೋತ್ಪಾದನೆ ಮತ್ತು ಕಡಲ ಭದ್ರತೆ ಬಲಪಡಿಸುವಲ್ಲಿ ಎರಡೂ ರಾಷ್ಟ್ರಗಳು ಸಾಮಾನ್ಯ ಹಿತಾಸಕ್ತಿ ಹೊಂದಿವೆ.* ಮೋದಿ ಅವರು, "ಭಾರತೀಯರ ನೈಪುಣ್ಯತೆ ಹಾಗೂ ಜಪಾನ್ ತಂತ್ರಜ್ಞಾನ ಒಟ್ಟಿಗೆ ಭವಿಷ್ಯದಲ್ಲಿ ಮಹತ್ವದ ಸಾಧನೆ ಮಾಡಲಿದೆ" ಎಂದು ಹರ್ಷ ವ್ಯಕ್ತಪಡಿಸಿದರು.