* ಭಾರತದಲ್ಲಿ ಕಳೆದ 50 ವರ್ಷಗಳಲ್ಲಿ ಮೊದಲ ಬಾರಿಗೆ ಜೀವಿತಾವಧಿಯಲ್ಲಿ ಇಳಿಕೆ ಕಂಡುಬಂದಿದ್ದು, ವರ್ಷಕ್ಕೆ 0.2 ವರ್ಷದಷ್ಟು ಕಡಿಮೆಯಾಗಿದೆ.* 2017ರಿಂದ 2021ರ ನಡುವೆ ಜೀವಿತಾವಧಿಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ.* ಗ್ರಾಮೀಣ ಪ್ರದೇಶಗಳಲ್ಲಿ 0.1 ವರ್ಷ ಮತ್ತು ನಗರ ಪ್ರದೇಶಗಳಲ್ಲಿ 0.3 ವರ್ಷದಷ್ಟು ಜೀವಿತಾವಧಿ ಇಳಿಕೆ ಕಂಡುಬಂದಿದೆ.* ಜನನದ ಸಮಯದಲ್ಲಿ ಮಹಿಳೆಯರ ಜೀವಿತಾವಧಿ ಪುರುಷರಿಗಿಂತ ಎರಡು ವರ್ಷ ಅಧಿಕವಾಗಿದೆ.* ಭಾರತದ ಹಲವೆಡೆ ಪುರುಷರ ಮತ್ತು ಮಹಿಳೆಯರ ಜೀವಿತಾವಧಿಯಲ್ಲಿ ವ್ಯತ್ಯಾಸ ಇದೆ. ದಿಲ್ಲಿಯಲ್ಲಿ ಪುರುಷರ ಸರಾಸರಿ ಜೀವಿತಾವಧಿ 73 ವರ್ಷವಾಗಿದ್ದು, ಕೇರಳದಲ್ಲಿ ಮಹಿಳೆಯರದು 77.9 ವರ್ಷಗಳಷ್ಟಿದೆ. ಛತ್ತೀಸ್ಗಢದಲ್ಲಿ ಪುರುಷರದು 62.8 ವರ್ಷ, ಮಹಿಳೆಯರದು 66.4 ವರ್ಷವಾಗಿದೆ.* 1970ರಿಂದ 2021ರ ಅವಧಿಯಲ್ಲಿ ಒಡಿಶಾದಲ್ಲಿ ಪುರುಷರ ಜೀವಿತಾವಧಿಯಲ್ಲಿ ಗರಿಷ್ಠ ಏರಿಕೆ ಕಂಡುಬಂದರೆ, ಹರಿಯಾಣದಲ್ಲಿ ಅತೀ ಕಡಿಮೆ ಏರಿಕೆಯಾಗಿದೆ. ಮಹಿಳೆಯರ ಜೀವಿತಾವಧಿ ಹಿಮಾಚಲ ಪ್ರದೇಶ ಮತ್ತು ಒಡಿಶಾದಲ್ಲಿ ಹೆಚ್ಚು, ಕೊರವಂನಲ್ಲಿ ಕಡಿಮೆ ಆಗಿದೆ.* 2021ರಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಸುಮಾರು 20 ಲಕ್ಷ ಸಾವುಗಳು ಸಂಭವಿಸಿದ್ದರಿಂದ, ಜೀವಿತಾವಧಿಯಲ್ಲಿ ಇಳಿಕೆ ಕಂಡುಬಂದಿದೆ. 2020ರ 8.2 ಮಿಲಿಯನ್ ಸಾವಿನ ಸಂಖ್ಯೆ 2021ರಲ್ಲಿ 10.2 ಮಿಲಿಯನ್ಗೆ ಏರಿಕೆಯಾಗಿದೆ. ಇದರಲ್ಲಿ ಶೇ.17.3 ಸಾವುಗಳಿಗೆ ಕೋವಿಡ್ ಕಾರಣವಾಗಿದೆ.