* ಉದ್ಯಮಿ ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಕಂಪನಿಗೆ ಉಪಗ್ರಹ ಆಧರಿತ ಇಂಟರ್ನೆಟ್ ಸೇವೆ ನೀಡಲು ಕೇಂದ್ರ ದೂರಸಂಪರ್ಕ ಇಲಾಖೆ ಪರವಾನಗಿ ನೀಡಿದೆ.* ಈ ಕಂಪನಿ ಟವರ್ರಹಿತ ಅತಿವೇಗದ ಇಂಟರ್ನೆಟ್ ಒದಗಿಸುವಲ್ಲಿ ಮುಂದಾಳತ್ವವಹಿಸಿದ್ದು, 100ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ನೀಡುತ್ತಿದೆ.* ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳು ತಮ್ಮ ಗ್ರಾಹಕರಿಗೆ ವೇಗದ ಇಂಟರ್ನೆಟ್ ಸೇವೆ ನೀಡಲು ಸ್ಟಾರ್ಲಿಂಕ್ನೊಂದಿಗೆ ಒಪ್ಪಂದ ಮಾಡಿವೆ.* ಮಳೆ ಅಥವಾ ಚಂಡಮಾರುತದಂತಹ ಪ್ರಾಕೃತಿಕ ಅಡಚಣೆಗಳ ನಡುವೆಯೂ ಸ್ಟಾರ್ಲಿಂಕ್ ಇಂಟರ್ನೆಟ್ ಸೇವೆ ನಿರಂತರವಾಗಿ ಲಭ್ಯವಿರುತ್ತದೆ. ಈ ಸೇವೆಯ ಡೌನ್ಲೋಡ್ ವೇಗವು ಸರಾಸರಿ 50 ರಿಂದ 150 ಎಂಬಿಪಿಎಸ್ ಇರಲಿದೆ.* ಸ್ಥಳೀಯ ಕಾನೂನುಗಳು ಹಾಗೂ ಭದ್ರತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಸರ್ಕಾರ ಸ್ಟಾರ್ಲಿಂಕ್ಗೆ ಸೂಚನೆ ನೀಡಿದೆ.