* ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಕಂಪನಿಗೆ ಭಾರತದಲ್ಲಿ ಉಪಗ್ರಹ ಆಧರಿತ ಇಂಟರ್ನೆಟ್ ಸೇವೆ ಪ್ರಾರಂಭಿಸಲು ದೂರಸಂಪರ್ಕ ಇಲಾಖೆಯ ಅನುಮತಿ ಲಭಿಸಿದೆ.* ಸ್ಟಾರ್ಲಿಂಕ್ ದೇಶದಲ್ಲಿ ಸ್ಯಾಟಲೈಟ್ ಇಂಟರ್ನೆಟ್ಗೆ ಅನುಮತಿ ಪಡೆದ ಮೂರನೇ ಕಂಪನಿಯಾಗಿದ್ದು, ಈ ಮೊದಲು ಜಿಯೋ ಮತ್ತು ಏರ್ಟೆಲ್ಗೆ ಇಂತಹ ಪರವಾನಗಿ ನೀಡಲಾಗಿತ್ತು.* GMPCS ಪರವಾನಗಿ ಬಳಿಕ, ಸ್ಟಾರ್ಲಿಂಕ್ ಸಕ್ರೀಯ ಸೇವೆ ಆರಂಭಿಸಲು IN-SPACEನ ಅನುಮೋದನೆ ಅಗತ್ಯವಿದೆ. ಈ ಅನುಮೋದನೆ ನಂತರ ಮಾತ್ರ ಗ್ರಾಹಕರು ಸೇವೆ ಪಡೆಯಲು ಸಾಧ್ಯವಾಗುತ್ತದೆ.* ಎಲಾನ್ ಮಸ್ಕ್ 2022ರಿಂದ ಸ್ಟಾರ್ಲಿಂಕ್ ಸೇವೆ ಭಾರತಕ್ಕೆ ತರಲು ಪ್ರಯತ್ನಿಸುತ್ತಿದ್ದು, ಅಮೆಜಾನ್ನ ಕೈಪರ್ ಕಂಪನಿಯೂ ಇದೇ ಗುರಿ ಹೊಂದಿದೆ.* ಜಿಯೋ ಕಂಪನಿಯ ಆಕ್ಷೇಪಗಳ ನಡುವೆಯೂ ಸ್ಟಾರ್ಲಿಂಕ್ಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮಸ್ಕ್ ಮತ್ತು ಟ್ರಂಪ್ ನಡುವೆ ಅಮೆರಿಕದಲ್ಲಿ ನಡೆದ ಟಕರಿಯೂ ಗಮನ ಸೆಳೆದಿದೆ.