* ಭಾರತದಲ್ಲಿ ವೃತ್ತಿಪರ ಶಿಕ್ಷಣವನ್ನು ಉನ್ನತೀಕರಿಸಲು ಅಐದು ಕೌಶಲ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.* 2025-26ರ ಬಜೆಟ್ನಲ್ಲಿ ಘೋಷಿಸಲಾದ ಕೇಂದ್ರ ಪ್ರಾಯೋಜಿತ ಯೋಜನೆಯಂತೆ, ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಉನ್ನತೀಕರಣ ಮತ್ತು ಕೌಶಲಕ್ಕಾಗಿ ಐದು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳ (ಎನ್ಸಿಒಇ) ಸ್ಥಾಪನೆಗಾಗಿ ರಾಷ್ಟ್ರೀಯ ಯೋಜನೆಯನ್ನು ಅನುಷ್ಠಾನಗೊಳಿಸ ಲಾಗುವುದು.* ಈ ಯೋಜನೆಯನ್ನು ರೂ. 60,000 ಕೋಟಿ (ಕೇಂದ್ರ ដោយ-20,000 . 2.කටක 20 10,000 2 ರೂ.) ವೆಚ್ಚದಲ್ಲಿ ಅನುಷ್ಠಾನಗೊಳಿಸ ಈ ಲಾಗುವುದು.* ಈ ಯೋಜನೆಯ ಅಡಿಯಲ್ಲಿ 1 ಸಾವಿರ ಸರಕಾರಿ ಐಟಿಐ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಜೊತೆಗೆ - ಐದು ರಾಷ್ಟ್ರೀಯ ಕೌಶಲ ತರಬೇತಿ ಸಂಸ್ಥೆಗಳ (ಎನ್ಎಸ್ಟಿಐ) ಸಾಮರ್ಥ್ಯ ವೃದ್ಧಿಯನ್ನೂ ಗೆ ಗಮನಹರಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ.* ಈ ಯೋಜನೆಯು ಅಸ್ತಿತ್ವದಲ್ಲಿರುವ ಐಟಿಐಗಳನ್ನು ರಾಜ್ಯ ಸರಕಾರ ಮತ್ತು ಕೈಗಾರಿಕಾ ಸಂಸ್ಥೆಗಳ ದ ಸಹಯೋಗದೊಂದಿಗೆ ಮಹತ್ವಾಕಾಂಕ್ಷೆಯ ಸಂಸ್ಥೆಗಳಾಗಿಸುವ ಗುರಿಯನ್ನು ಹೊಂದಿದೆ.* ಐದು ವರ್ಷಗಳ ಅವಧಿಯಲ್ಲಿ ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲದ ಅಗತ್ಯವನ್ನು ಪೂರೈಸುವ ಕೋರ್ಸ್ಗಳ ಮೂಲಕ 20 ಲಕ್ಷ ಯುವಕರಿಗೆ ಕೌಶಲ ತರಬೇತಿ ನೀಡಲಾಗುತ್ತದೆ.* ಇದು ಸ್ಥಳೀಯ ಕಾರ್ಯಪಡೆಯ ಪೂರೈಕೆ ಮತ್ತು ಉದ್ಯಮದ ಬೇಡಿಕೆಯ ನಡುವೆ ಹೊಂದಾಣಿಕೆಯನ್ನು ಏರ್ಪಡಿಸುತ್ತದೆ. ಇದರಿಂದ ಎಂಎಸ್* ಎಂಇಗಳು ಸೇರಿದಂತೆ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಈ ಯೋಜನೆಯಡಿಯಲ್ಲಿ ಭುವನೇಶ್ವರ, ಚೆನ್ನೈ, ಹೈದರಾಬಾದ್, ಕಾನ್ಸುರ ಮತ್ತು ಲುಧಿಯಾನ ರಾಷ್ಟ್ರೀಯ ಕೌಶಲ ತರಬೇತಿ ಸಂಸ್ಥೆಗಳಲ್ಲಿ (ಎನ್ಎಸ್ಟಿಐ) ಸುಧಾರಿತ ತರಬೇತಿ (ಟಿಒಟಿ) ಸೌಲಭ್ಯಗಳಿಗಾಗಿ ಮೂಲಸೌಕರ್ಯ ಮೇಲ್ದರ್ಜೆಗೇರಿಸಲಾಗುತ್ತದೆ.* ಹೆಚ್ಚುವರಿಯಾಗಿ, 50,000 ತರಬೇತುದಾರರಿಗೆ ಸೇವಾ ತರಬೇತಿಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ.