* ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1,400ಕ್ಕೂ ಹೆಚ್ಚು ಕಂಪನಿಗಳು ಉಭಯ ದೇಶಗಳ ನಡುವಿನ ನಿಕಟ ಆರ್ಥಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ಕೋಲ್ಕತ್ತಾದಲ್ಲಿರುವ ಜಪಾನ್ನ ಕಾನ್ಸುಲ್ ಜನರಲ್ ನಕಗಾವಾ ಕೊಯಿಚಿ ಅವರು ನವೆಂಬರ್ 23 ರಂದು (ಶನಿವಾರ) ತಿಳಿಸಿದ್ದಾರೆ.* ಭದ್ರತೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ವಿವಿಧ ಜಾಗತಿಕ ಸಮಸ್ಯೆಗಳ ಬಗ್ಗೆ ಉಭಯ ರಾಷ್ಟ್ರಗಳು ಕೆಲಸ ಮಾಡುತ್ತಿವೆ ಎಂದು ನಕಗಾವಾ ಕೊಯಿಚಿ ಅವರು ಹೇಳಿದರು.* 2000 ಮತ್ತು 2024 ರ ನಡುವೆ ಸುಮಾರು USD 42 ಶತಕೋಟಿ ವಿದೇಶಿ ನೇರ ಹೂಡಿಕೆಯೊಂದಿಗೆ (FDI) ಜಪಾನ್ ಭಾರತದಲ್ಲಿ ಬಂಡವಾಳ ಹೂಡುವ ರಾಷ್ಟ್ರಗಳ ಪೈಕಿ ಜಪಾನ್ ಐದನೇ ಅತಿದೊಡ್ಡ ದೇಶವಾಗಿದೆ.* ರವೀಂದ್ರನಾಥ ಟ್ಯಾಗೋರ್, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತಹ ಉಭಯ ದೇಶಗಳ ಪ್ರಮುಖ ವ್ಯಕ್ತಿಗಳ ನಡುವೆ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿನಿಮಯದ ಮೂಲಕ ಆಧುನಿಕ ಜಪಾನ್-ಭಾರತ ಸಂಬಂಧವು 20 ನೇ ಶತಮಾನದ ಆರಂಭದಲ್ಲಿ ರೂಪುಗೊಳ್ಳಲು ಪ್ರಾರಂಭಿಸಿತು ಎಂದು ಕೊಯಿಚಿ ಅವರು ತಿಳಿಸಿದರು.