* ಭಾರತ ಮತ್ತು ಭೂತಾನ್ ನಡುವೆ ಮೊದಲ ರೈಲು ಸಂಪರ್ಕ ಕಲ್ಪಿಸುವ 69 ಕಿ.ಮೀ. ಉದ್ದದ ಕೊಕ್ರಝಾರ್–ಗೆಲೆಫು ರೈಲು ಹಳಿ ಯೋಜನೆಯನ್ನು ವಿಶೇಷ ರೈಲ್ವೆ ಯೋಜನೆಯಾಗಿ ಘೋಷಿಸಲಾಗಿದೆ.* ಭೂಸ್ವಾಧೀನವನ್ನು ತ್ವರಿತಗೊಳಿಸಲು ರೈಲ್ವೆ ಕಾಯ್ದೆ–1989ರಡಿ ಅಧಿಸೂಚನೆ ಹೊರಡಿಸಲಾಗಿದೆ.* ಈ ಯೋಜನೆ ಸರ್ಕಾರದ ಆ್ಯಕ್ಟ್ ಈಸ್ಟ್ ನೀತಿಗೆ ಅನುಗುಣವಾಗಿದ್ದು, ಭೂತಾನ್ಗೆ ಭಾರತದಿಂದ ಮೊದಲ ಬಾರಿಗೆ ರೈಲು ಸಂಪರ್ಕ ನೀಡಲಿದೆ.* ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಭೂತಾನ್ ಭೇಟಿಯ ಸಂದರ್ಭದಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು.* ಕೊಕ್ರಝಾರ್–ಗೆಲೆಫು ಜೊತೆಗೆ ಬನರ್ಹಾತ್–ಸ್ಯಾಮ್ತ್ಸೆ (16 ಕಿ.ಮೀ.) ರೈಲು ಮಾರ್ಗವೂ ಅಭಿವೃದ್ಧಿಯಾಗಲಿದೆ, ಇದು ಭೂತಾನ್ ಮತ್ತು ಪಶ್ಚಿಮ ಬಂಗಾಳವನ್ನು ಸಂಪರ್ಕಿಸುತ್ತದೆ.* ಯೋಜನೆ ರಾಷ್ಟ್ರೀಯ ಭದ್ರತೆ ಬಲಪಡಿಸುವುದರ ಜೊತೆಗೆ, ಸಾಮಾಜಿಕ–ಆರ್ಥಿಕ ಪ್ರಗತಿಗೂ ಉತ್ತೇಜನ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.