* ಇನ್–ಸ್ಪೇಸ್ ಅಧ್ಯಕ್ಷ ಪವನ್ ಕುಮಾರ್ ಗೋಯೆಂಕಾ ಅವರು ತಿಳಿಸಿದಂತೆ, ಭಾರತವು ತನ್ನ ರಕ್ಷಣಾ ವಲಯದ ಕಣ್ಗಾವಲು ಸಾಮರ್ಥ್ಯವನ್ನು ಮುಂದಿನ ಐದು ವರ್ಷಗಳಲ್ಲಿ 52 ಬೇಹುಗಾರಿಕಾ ಉಪಗ್ರಹಗಳನ್ನು ಖಾಸಗಿ ಸಹಯೋಗದೊಂದಿಗೆ ಕಕ್ಷೆಗೆ ಕಳುಹಿಸುವ ಮೂಲಕ ಬಲಪಡಿಸಲಿದೆ.* ಈ ಉಪಗ್ರಹಗಳ ಮೂಲಕ ಬಾಹ್ಯಾಕಾಶ ಆಧಾರಿತ ನಿಗಾವಳಿ ಸಾಮರ್ಥ್ಯ ಹೆಚ್ಚಳವಾಗಲಿದೆ ಎಂದೂ ಅವರು ಹೇಳಿದ್ದಾರೆ.* ಪಿಟಿಐ ಸುದ್ದಿಸಂಸ್ಥೆಗೆ ಜಾಗತಿಕ ಬಾಹ್ಯಾಕಾಶ ಪರಿಶೋಧನಾ ಸಮ್ಮೇಳನ–2025 ವೇಳೆ ಮಾತನಾಡಿದ ಅವರು ಈ ಮಾಹಿತಿ ನೀಡಿದ್ದಾರೆ.* ಶತ್ರು ಚಟುವಟಿಕೆಗಳನ್ನು ಪತ್ತೆ ಹಚ್ಚುವುದು, ಗಡಿ ಪ್ರದೇಶಗಳನ್ನು ನಿಗಾವಹಿಸುವುದು ಮತ್ತು ಸೇನಾ ಕಾರ್ಯಾಚರಣೆ ವೇಳೆ ಸಮನ್ವಯ ಕಾಪಾಡುವುದು ಈ ಉಪಗ್ರಹಗಳ ಪ್ರಮುಖ ಉದ್ದೇಶವಾಗಿದೆ.* ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಬಳಕೆಗೆ ಇವು ಸಹಕಾರಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.* ಈ 52 ಉಪಗ್ರಹಗಳಲ್ಲಿ ಅರ್ಧದಷ್ಟನ್ನು ಖಾಸಗಿ ವಲಯದಿಂದ ಪೂರೈಸಲಾಗಿದ್ದು, ಉಳಿದ ಉಪಗ್ರಹಗಳನ್ನು ಇಸ್ರೊ ನಿರ್ಮಿಸಲಿದೆ ಎಂದು ಅವರು ತಿಳಿಸಿದ್ದಾರೆ.